ಶಿವಮೊಗ್ಗ: ದಿನಾಂಕ 29,30 ನೇ ಜೂನ್ ಹಾಗೂ ಜುಲೈ 1 ಈ ಮೂರೂ ದಿನಗಳ ಕಾಲ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ವತಿಯಿಂದ ಶಿವಮೊಗ್ಗದಲ್ಲಿ ರಾಜ್ಯ ಮಟ್ಟದ “ಕನ್ನಡ ವಿಜ್ಞಾನ ಸಮ್ಮೇಳನ” ಆಯೋಜಿಸಲ್ಪಟ್ಟಿದೆ.
ಈ ಸಮ್ಮೇಳನದಲ್ಲಿ ನಾಡಿನ ಹೆಸರಾಂತ ವಿಜ್ಞಾನಿಗಳು, ವಿಜ್ಞಾನ ಲೇಖಕರು, ವಿಜ್ಞಾನ ಸಂವಹನಕಾರರು,ಮತ್ತು ಚಿಂತಕರು ಭಾಗವಹಿಸಿ ವಿಜ್ಞಾನದ ಸಂಪನ್ಮೂಲ ಒದಗಿಸಲಿದ್ದಾರೆ. ಆಸಕ್ತರು ಸಮ್ಮೇಳನದಲ್ಲಿ ಭಾಗವಹಿಸಿ ಸದುಪಯೋಗ ಪಡೆಯುವಂತೆ ವಿನಂತಿಸಲಾಗಿದೆ. ಸಮ್ಮೇಳನದಲ್ಲಿ ಭಾಗವಹಿಸುವ ವಿಜ್ಞಾನಸಕ್ತರಿಗೆ ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗಿದ್ದು, ಭಾಗವಹಿಸುವ ಎಲ್ಲರಿಗೂ ಓಓಡಿ ಸೌಲಭ್ಯ ಕಲ್ಪಿಸಲಾಗಿದೆ. ಸಮ್ಮೇಳನಕ್ಕೆ ಹೋಗುವವರು 100 ರೂಪಾಯಿಗಳನ್ನು ಕೊಟ್ಟು ನೊಂದಾಯಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17-06-2018 ಆಗಿರುತ್ತದೆ. ಎಂದು ಕ.ರಾ.ವಿ.ಪ ಜಿಲ್ಲಾ ಸಮಿತಿ ಕಾರ್ಯದರ್ಶಿ ಎಚ್.ಎಸ್.ಟಿ.ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಹಾಗೂ ನೋಂದಣಿಗಾಗಿ ಸಂಪರ್ಕಿಸಬಹುದಾದ ಮೊಬೈಲ್ ಸಂಖ್ಯೆ 9448565534