ನವದೆಹಲಿ: ಓಲಾ-ಉಬರ್ ಸೇವೆಯಿಂದ ಆಟೋಮೊಬೈಲ್ ಕ್ಷೇತ್ರ ಕುಸಿದಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಮಾರುತಿ ಸುಜುಕಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀನಿವಾಸ್ತವ್ ವಿತ್ತ ಸಚಿವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತಾನಾಡಿದ ಅವರು ಈ ಅವಧಿಯಲ್ಲೂ ಆಟೋಮೊಬೈಲ್ ಕ್ಷೇತ್ರ ಉನ್ನತ ದಿನಗಳನ್ನು ಕಂಡಿದೆ. ಆದರೆ, ಇದೀಗ ಕುಸಿತ ಹೆಚ್ಚಿದೆ. ಹೀಗಾಗಿ ಕುಸಿತಕ್ಕೆ ಓಲಾ-ಉಬರ್ ಕಾರಣ ಎಂದು ಉಹಿಸಬೇಡಿ. ಈ ತೀರ್ಮಾನಕ್ಕೆ ಬರುವುದಾದರೆ ಸೂಕ್ತ ಸಂಶೋಧನೆ, ಅಧ್ಯಯನದ ಅಗತ್ಯತೆ ಇದೆ ಎಂದಿದ್ದಾರೆ.