ಹೈದರಾಬಾದ್ : ಸತತ 28 ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ ಖ್ಯಾತಗಾಯಕ ಎಸ್ ಪಿ ಬಾಲಸುಬ್ರಹ್ಮಣಂ ಅವರು, ಇದೀಗ ಚೇತರಿಸಿಕೊಂಡಿದ್ದಾರೆ. ಸತತ ಕೊರೋನಾ ಚಿಕಿತ್ಸೆಯ ನಂತ್ರ ಕೊರೋನಾ ಸೋಂಕಿನಿಂದ ಗೆದ್ದು ಬಂದಿದ್ದಾರೆ.

74 ವರ್ಷದ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆಗಸ್ಟ್ 5ರಂದು ಆಸ್ಪತ್ರೆಗೆ ದಾಖಲಾಗಿದ್ದರು.

ಈ ಕುರಿತು ಎಸ್ ಬಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಕುರಿತಂತೆ ಪುತ್ರ ಚರಣ್ ಅವರು ಸ್ಪಷ್ಟ ಪಡಿಸಿದ್ದು, ತಂದೆಯವರು ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.