11 ಸಾವಿರ ಶಿಕ್ಷಕರ ನೇಮಕಾತಿ ಗ್ರೀನ್ ಸಿಗ್ನಲ್..!
ಬೆಂಗಳೂರು: ರಾಜ್ಯ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾದ ಎಸ್.ಆರ್.ಶ್ರೀನಿವಾಸ್ ಅವರು ಶಿಕ್ಷಕರಿಗೆ ಸಿಹಿಸುದ್ದಿಯೊಂದು ನೀಡಿದ್ದಾರೆ.

ಉತ್ತರ ಕರ್ನಾಟಕ ಭಾಗದಲ್ಲಿ 11 ಸಾವಿರ ಶಿಕ್ಷಕರ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಇಲ್ಲಿಯವರೆಗೆ 2 ಸಾವಿರ ಶಿಕ್ಷಕರ ಭರ್ತಿಯಾಗಿದೆ. ಉಳಿದ ಹುದ್ದೆಗಳನ್ನು ಸದ್ಯದಲ್ಲಿಯೇ ಭರ್ತಿ ಮಾಡಲಾಗುವುದು. ನೇಮಕಾತಿಗೂ ಮುನ್ನ ಪ್ರವೇಶ ಪರೀಕ್ಷೆ ನಡೆಸಿ, 75%ಕ್ಕೂ ಹೆಚ್ಚು ಅಂಕ ಪಡೆದವರಿಗೆ ಮಾತ್ರ ಹುದ್ದೆ ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.!