ಚಿತ್ರದುರ್ಗ: ಬಳ್ಳಾರಿ ಜಿಲ್ಲೆ ಹೊಸಪೇಟೆ ತಾ: ಹಂಪಿ ಕ್ಷೇತ್ರದ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನನದ ೨೦೧೮ ನೇ ಸಾಲಿನ ವಾರ್ಷಿಕ ಜಾತ್ರಾ ಮಹೋತ್ಸವ ಇದೇ ಮಾರ್ಚ್ 25 ರಿಂದ ಏಪ್ರಿಲ್ 2 ರವರೆಗೆ ವಿಜೃಂಭಣೆಯಿಂದ ಜರುಗುವುದು. ಹಂಪಿ ಕ್ಷೇತ್ರದ ಪೀಠಾಧಿಪತಿಗಳಾದ ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮಿಗಳ ಮಾರ್ಗದರ್ಶನದಲ್ಲಿ ಮಾರ್ಚ್ 31 ರಂದು ಹಂಪಿ ವಿರೂಪಾಕ್ಷೇಶ್ವರ ಸ್ವಾಮಿ ಮತ್ತು ಶ್ರೀ ಚಂದ್ರಮೌಳೇಶ್ವರ ಸ್ವಾಮಿಯ ಜೋಡಿ ರಥೋತ್ಸವವು ಜರುಗುವುದು. ಲಕ್ಷಾಂತರ ಭಕ್ತಾಧಿಗಳು ಈ ಧಾರ್ಮಿಕ ರಥೋತ್ಸವದಲ್ಲಿ ಭಾಗವಹಿಸುವರು.
ಮಾರ್ಚ29 ರಿಂದ ಏಪ್ರಿಲ್ 2 ರವರೆಗೆ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಗೆ ಶ್ರೀ ಕೃಷ್ಣದೇವರಾಯ ಸಮರ್ಪಿಸಿದ ಚಿನ್ನದ ಕಿರೀಟದಿಂದ ಅಲಂಕಾರ ಮಾಡಲಾಗುವುದು. ಮಾರ್ಚ್ ೩೧ ರಂದು ಭಕ್ತಾಧಿಗಳಿಗೆ ಉಚಿತ ಅನ್ನದಾಸೋಹ ಪ್ರಸಾದ ವಿತರಣೆ ಕಾರ್ಯಕ್ರಮ ಜರುಗುವುದು.
ಈ ಎರಡೂ ಧಾರ್ಮಿಕ ಜಾತ್ರಾ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಿ ಶ್ರೀದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ಧರ್ಮದರ್ಶಿಗಳು ಕೋರಿದ್ದಾರೆ