ಮಂಡ್ಯ: ನಾಯ್ಡು ಸಮುದಾಯವನ್ನು ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿರುವ ರಾಜ್ಯ ಬಲಿಜ ಸಂಘಟನೆಯು ಸಂಸದ ಶಿವರಾಮೇಗೌಡ ಕ್ಷಮೆಗೆ ಆಗ್ರಹಿಸಿದೆ. ಸಮುದಾಯದ ಆತ್ಮಗೌರವಕ್ಕೆ ಧಕ್ಕೆ ತಂದ ಸಂಸದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

 

ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನು ಜಾತಿ ಆಧಾರದ ಮೇಲೆ ಟೀಕಿಸುವ ಭರದಲ್ಲಿ ಮಂಡ್ಯವನ್ನು ನಾಯ್ಡುಮಯ ಮಾಡಲಾಗುತ್ತಿದೆ ಎಂದು ಶಿವರಾಮೇಗೌಡ ಟೀಕಿಸಿದ್ದರು ಹಿನ್ನೆಲೆಯಲ್ಲಿ ರಾಜ್ಯ ಬಲಿಜ ಸಂಘಟನೆಯು ಶಿವರಾಮೇಗೌಡರ ವಿರುದ್ಧ ದೂರು ದಾಖಲಿಸಲು ಮುಂದಾಗಿದೆ.