ಬೆಂಗಳೂರು: ರಾಜ್ಯದಲ್ಲಿ ಕೆಲವು ದಿನಗಳಿಂದ ಮಳೆ ಪ್ರಮಾಣ ಕಡಿಮೆ ಆಗಿದೆ ಕೆಲವೊಂದು ಕಡೆಗಳಲ್ಲಿ ಬಿತ್ತನೆ ಪ್ರಾರಂಭವಾಗಿದೆ. ಆದ್ರೆ  ಮತ್ತೆ ರಾಜ್ಯಕ್ಕೆ 22 ರಿಂದ ಮಳೆಆಗುವ ಸಾಧ್ಯತೆ ಇದೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆಯ ನಿರ್ದೇಶಕರಾದ ಶ್ರೀನಿವಾಸ್ ರೆಡ್ಡಿಯವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

.ರಾಜ್ಯಾದ್ಯಂತ ಹಲವು ನದಿಗಳು ಮೈದುಂಬಿ ಹರಿಯುತ್ತಿರುವ ಕಾರಣ ಜಲಾಶಯಗಳು ಭಾಗಶಃ ತುಂಬಿದ್ದು, ರೈತನ ಮೊಗದಲ್ಲಿ ಮಂದ ಹಾಸ ಮೂಡಿದೆ. ಮತ್ತೆ ಮಳೆ ಬಂದಾಗ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳ ಬೇಕೆಂದು ಹೇಳಿದ್ದಾರೆ.