ನವದೆಹಲಿ :2020 ನೇ ಸಾಲಿನ ಸಿಬಿಎಸ್ ಸಿಯ 10 ಮತ್ತು 12 ನೇ ತರಗತಿ ವಾರ್ಷಿಕ ಪರೀಕ್ಷೆಯ ತಾತ್ಕಲಿಕ ವೇಳಾಪಟ್ಟಿ ಪ್ರಕಟಿಸಿದ್ದು, 10 ಮತ್ತು 12 ನೇ ತರಗತಿ ಪ್ರ್ಯಾಕ್ಟಿಕಲ್ ಮತ್ತು ಪ್ರಾಜೆಕ್ಟ್ 2020 ಜನವರಿ 1 ರಿಂದ ಫೆಬ್ರವರಿ 7 ರ ವರೆಗೆ ನಡೆಯಲಿದ್ದು , ವಾರ್ಷಿಕ ಲಿಖಿತ ಪರೀಕ್ಷೆ ಫೆಬ್ರವರಿ 15 ರಂದು ಆರಂಭವಾಗಲಿದ್ದು , ಮಾರ್ಚ್ ಅಂತ್ಯಕ್ಕೆ ಕೊನೆಗೊಳ್ಳಲಿವೆ .

ಸಿಬಿಎಸ್ ಸಿ ಅಧಿಕೃತ ವೆಬ್ ಸೈಟ್ ನಲ್ಲಿ ಈ ಕುರಿತು ಮಾಹಿತಿ ನೀಡಲಾಗಿದ್ದು , ಈ ಬಾರಿ 12 ನೇ ತರಗತಿ ಮುಖ್ಯ ಪರೀಕ್ಷೆಯು ಸಹ ಫೆಬ್ರವರಿ 2020 ರಿಂದ ಆರಂಭವಾಗಲಿದೆ . ಎರಡು ತರಗತಿಗಳ ಪರೀಕ್ಷೆ ಫಲಿತಾಂಶವನ್ನು ಮೇ . 2 ಮತ್ತು ಮೇ . 6 ರಂದು ಪ್ರಕಟಿಸುವ ಸಾಧ್ಯತೆ ಇದೆ .

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ 2020 ನೇ ಸಾಲಿನ ವಾರ್ಷಿಕ ಪರೀಕ್ಷೆ ಪ್ರಯುಕ್ತ ಹಮ್ಮಿಕೊಂಡಿರುವ ಇತರೆ ಮಾಹಿತಿಗಳನ್ನು ನೋಟಿಫಿಕೇಷನ್ ನಲ್ಲಿ ನೀಡಿದೆ .