ನವದೆಹಲಿ : ನಿನ್ನೆ ಸ್ವಾವಲಂಭನೆಯ ಭಾರತ ನಿರ್ಮಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು 20 ಲಕ್ಷ ಕೋಟಿ ವಿಶೇಷ ಆರ್ಥಿಕ ಪ್ಯಾಕೇಜ್ ಅನ್ನು ಘೋಷಣೆ ಮಾಡಿದ್ದಾರು ಅದರ ಅಂಗವಾಗಿ ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿ ಗೋಷ್ಠಿಯಲ್ಲಿ ಕೆಲ ಮುಖ್ಯಾಂಶಗಳನ್ನು ಹೇಳಿದ್ದಾರೆ.

ಈ ಹಿಂದಿನ 1.70 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆಯ ಬಗ್ಗೆಯೂ, ಅದನ್ನು ಯಾವುದಕ್ಕೆ ಬಳಕೆ ಮಾಡಲಾಗಿದೆ. ಈ ಮೂಲಕ ಸಂಕಷ್ಟದಲ್ಲಿರುವ ದೇಶದ ಜನರಿಗೆ ಹೇಗೆ ಬಲವರ್ಧನೆ ನೀಡಲಾಗಿದೆ ಎಂಬುದಾಗಿ ವಿವರಣೆ ನೀಡಿದರು.

ಆದಾಯ ತೆರಿಗೆ, ಜಿ ಎಸ್ ಟಿ ರಿಟರ್ನ್ಸ್ ಸಲ್ಲಿಕೆಯ ಅವಧಿಯನ್ನು ಜೂನ್ ಅಂತ್ಯದವರೆಗೆ ವಿಸ್ತರಣೆ ಮಾಡಲಾಗಿದೆ. ಈ ಮೂಲಕ ದೇಶದ ಜನರನ್ನು ಲಾಕ್ ಡೌನ್ ಸಂಕಷ್ಟದ ಸಂದರ್ಭದಲ್ಲಿ ನೆಮ್ಮದಿಯ ನಿಟ್ಟುಸಿರುವ ಬಿಡುವಂತೆ ಮಾಡಲಾಗಿದೆ ಎಂಹಬುದಾಗಿ ತಿಳಿಸಿದರು. ‌ 18 ಸಾವಿರ ಕೋಟಿ ರೂಪಾಯಿ ಆದಾಯ ತೆರಿಗೆ ವಾಪಸು ನೀಡುವುದಾಗಿ ಹೇಳಿದರು.

ಪ್ಯಾಕೇಜ್​ಗೆ ಸಂಬಂಧಪಟ್ಟಂತೆ ಇಂದು 15 ಹೊಸ ಕ್ರಮಗಳನ್ನು ಕೈಗೊಳ್ಳಲಾಗುವುದು. ಅದರಲ್ಲಿ 6 ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಂಬಂಧಪಟ್ಟದ್ದಾಗಿವೆ. ಎರಡು ಇಪಿಎಫ್​ಗೆ, ಎರಡು ಎಚ್​ಎಫ್​ಸಿಎಸ್​ ಮತ್ತು ಎಂಎಫ್​ಐಎಸ್​ಗೆ ಹಾಗೂ ಒಂದು ಡಿಸ್ಕಾಮ್​ಗಳಿಗೆ, ಒಂದು ಗುತ್ತಿಗೆದಾರರು, ಒಂದು ರಿಯಲ್ ಎಸ್ಟೇಟ್​ ಮತ್ತು ಇತರರಿಗೆ ಸಂಬಂಧಪಟ್ಟದ್ದು ಎಂದು ತಿಳಿಸಿದರು. ಹಾಗೇ ಮೊದಲನೇದಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ 3 ಲಕ್ಷ ಕೋಟಿ ರೂಪಾಯಿ ಸಾಲ ನೀಡುವುದಾಗಿ ತಿಳಿಸಿದರು.

ಆತ್ಮ ನಿರ್ಭರ್ ಭಾರತ್ ಅಭಿಯಾನ್ ಆರಂಭವಾಗಿದೆ. 5 ಸ್ತಂಭಗಳ ಆಧಾರದಲ್ಲಿ ಸ್ವಾವಲಂಬಿ ಭಾರತ ನಿರ್ಮಾಣ ಮಾಡಲಾಗುತ್ತಿದೆ. ಎಲ್ಲಾ ವಲಯಗಳ ಬೇಡಿಕೆ ಆಧರಿಸಿ ಪ್ಯಾಕೇಜ್ ವಿಂಗಡಣೆ. ವ್ಯವಹಾರದ ವಾತಾವರಣ ಇನ್ನಷ್ಟು ಸರಳ ಮಾಡಲಾಗುತ್ತಿದೆ. ನೇರ ನಗದು ವರ್ಗಾವಣೆಯಿಂದ ಹಲವರಿಗೆ ಪ್ರಯೋಜನವಾಗಿದೆ. ಲಾಕ್ ಡೌನ್ ವೇಳೆ ರೈತರ ಕೈ ಹಿಡಿದಿದ್ದು ಕಿಸಾನ್ ಸಮ್ಮಾನ್ ಯೋಜನೆ ಆಗಿದೆ ಎಂದರು.