ಬೆಂಗಳೂರು:  ಮುಖ್ಯ ಮಂತ್ರಿ ಕುಮಾರಸ್ವಾಮಿ ಯವರು ಬೆಳಗಾವಿ ಪ್ರವಾಸ ರದ್ದು ಮಾಡಿದ್ದಿಕ್ಕೆ ಕಬ್ಬಬು ಬೆಳೆಗಾರರು ಪ್ರತಿಭಟನೆ ನಡೆಸಿದರು. ಸುರ್ವಣ ಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದರು. ಆ ನಂತರ ಮುಖ್ಯ ಮಂತ್ರಿಗಳು ಪ್ರತಿಭಟನೆ ನಡೆಸುತ್ತಿರುವ ರೈತರು ಗೂಂಡಾಗಳು ಎಂದು ಕರೆದರು. ರೈತರ ಪ್ರತಿಭಟನೆ ಜೂರಾಗುತ್ತಿದ್ದಂತೆ, ರೈತರ ಆಕ್ರೋಶವನ್ನು ತಣಿಸಲು ಸಿಎಂ ಮುಂದ್ದಾರೆ.

ರೈತರ ವಿರುದ್ಧ ಯಾವುದೇ ದೂರು ದಾಖಲಿಸದೆ ಅವರ ಜೊತೆ ಮಾತುಕತೆ ನಡೆಸಿ ಎಂದು ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ. ನವೆಂಬರ್ 20ರಂದು ಬೆಂಗಳೂರಿನಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತ ಮುಖಂಡರ ಜೊತೆ ಸಿಎಂ ಸಭೆ ನಡೆಸಲಿದ್ದಾರೆ.