ಬೆಳಗಾವಿ : 2 ಸಾವಿರ ಮುಖಬೆಲೆಯ ಖೋಟಾ ನೋಟು ಪ್ರಕರಣದಲ್ಲಿ ಮೂವರನ್ನು ಬಂಧಿಸಿಲಾಗಿದೆ ಎಂದು ರಾಷ್ಟ್ರೀಯ ತನಿಖಾ ದಳ ಬಹಿರಂಗ ಪಡಿಸಲಾಗಿದೆಯಂತೆ.

ತನ್ನ ಚಾರ್ಜ ಶೀಟ್ ನಲ್ಲಿ ಬೆಳಗಾವಿಯಲ್ಲಿ ಹಂಚಿಕೆಯಾಗುತ್ತಿದ್ದ ಪಿಂಕ್ ಖೋಟಾ ನೋಟ್ ಗಳು ಬಾಂಗ್ಲಾದೇಶದಿಂದ ಬರುತ್ತಿದ್ದವಂತೆ. ಅಷ್ಟೇ ಅಲ್ಲದೇ ಸಕ್ಕರೆ ಕಾರ್ಖಾನೆಯ ಕೆಲಸಗಾರರನ್ನೇ ಟಾರ್ಗೆಟ್ ಮಾಡಿಕೊಂಡು ನೋಟುಗಳನ್ನು ಹಂಚಲಾಗುತ್ತಂತೆ

ಗುಪ್ತಚರ ಇಲಾಖೆಯ ಮಾಹಿತಿ ಆಧರಿಸಿ ಬಂಧಿತರವಾಗಿರುವ ಚಿಕ್ಕೋಡಿ ಮೂಲದ ಆಶೋಕ್ ಕುಂಬಾರ್ ಹಾಗೂ ಪಶ್ಚಿಮ ಬಂಗಾಳ ಮೂಲದ ದಾಲಿಮ್ ಮಿಯಾ ಮತ್ತು ಬೆಳಗಾವಿ ಮೂಲದ ರಾಜೇಂದ್ರ ಬಾಪು ಪಾಟೀಲ್ ನ್ನ ಎಸ್ ಐಎ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ.