ಚಿತ್ರದುರ್ಗ:    ವಿಧಾನಸಭೆ ಚುನಾವಣೆ ಮುಗಿದ ಮೇಲೆ ಚಿತ್ರದುರ್ಗದಲ್ಲಿ ಅನೇಕ ಕ್ಲಬ್‌ಗಳು ತಲೆಎತ್ತಿರುವುದರಿಂದ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಚಿತ್ರದುರ್ಗ ಸುತ್ತಮುತ್ತಲಿನವರು ನಗರಕ್ಕೆ ಬಂದು ದೊಡ್ಡ ಗ್ಯಾಮ್ಲಿಂಗ್ ನಡೆಸುತ್ತಿದ್ದಾರೆ ಎಂದು ಶಾಸಕ ತಿಪ್ಪಾರೆಡ್ಡಿ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಈ ಸಂಬಂಧ ಜಿಲ್ಲಾ ರಕ್ಷಣಾಧಿಕಾರಿ ಜೊತೆ ಮಾತನಾಡಿದ್ದೇನೆ. ತಕ್ಷಣವೇ ಕ್ರಮ ಜರುಗಿಸಿ ಜೂಜುಕೋರರನ್ನು ಮಟ್ಟಹಾಕಿ ಕ್ಲಬ್‌ಗಳನ್ನು ಬಂದ್ ಮಾಡಬೇಕು. ಇಲ್ಲವಾದಲ್ಲಿ ವಿಧಾನಸಭೆಯಲ್ಲಿ ಪ್ರಶ್ನಿಸಿ ಇಲಾಖೆ ವಿರುದ್ದ ಹೋರಾಟ ಮಾಡಬೇಕಾಗುತ್ತದೆ ಎಂದು ಶಾಸಕರು ಎಚ್ಚರಿಸಿದರು.
ವಿಧಾನಪರಿಷತ್ ಸದಸ್ಯ ರಘುಆಚಾರ್ ಕೂಡ ದೂರವಾಣಿ ಮೂಲಕ ನನ್ನ ಜೊತೆ ಮಾತನಾಡಿ ಚಿತ್ರದುರ್ಗದಲ್ಲಿ ಕ್ಲಬ್‌ಗಳು ಹೆಚ್ಚುತ್ತಿರುವುದರಿಂದ ಜೂಜುಕೋರರ ಹಾವಳಿಗೆ ಕಡಿವಾಣ ಹಾಕಲು ಗೃಹಸಚಿವರ ಬಳಿ ಮಾತನಾಡುತ್ತೇನೆ ನಿಮ್ಮ ಬೆಂಬಲ ಬೇಕು ಎಂದು ಕೋರಿರುವುದಾಗಿ ಶಾಸಕರು ತಿಳಿಸಿದರು.