ಬೆಂಗಳೂರು : ಈ ಘಟನೆ ನಡೆದಿರುವುದು ಕಳೆದ ಎರಡು ವರ್ಷಗಳ ಹಿಂದಿನ ಕತೆ ಗೂಳಿಹಟ್ಟಿ ಶೇಖರ್ ಗ್ರಾನೈಟ್ ಸ್ಟಾಕ್ ಯಾರ್ಡ್ ಆರಂಭಕ್ಕೆ ನಾರಾಯಣರೆಡ್ಡಿ ಅವರಿಂದ ಭೂಮಿ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಸರ್ವೆ ನಂ.148ರಲ್ಲಿನ 10 ಎಕರೆ ಭೂಮಿ ಕೊಡಿಸುವುದಾಗಿ ಹೇಳಿದ್ದ. ಈ ಜಾಗವು ತನ್ನ ಪತ್ನಿ ಮತ್ತು ಅತ್ತೆ ಹೆಸರಿನಲ್ಲಿದ್ದು, ನಿಮಗೆ ಕರಾರು ಮಾಡಿಕೊಡುವುದಾಗಿ ನಾರಾಯಣರೆಡ್ಡಿ ತಿಳಿಸಿದ್ದ. ಅದರಂತೆ ಒಪ್ಪಿಕೊಂಡು ಆರ್ಟಿಜಿಎಸ್ ಮೂಲಕ 50 ಲಕ್ಷ ರು. ಹಾಗೂ ನಗದು 50 ಲಕ್ಷ ರು. ಹಣವನ್ನು ನಾರಾಯಣ ರೆಡ್ಡಿ ಅವರಿಗೆ ನೀಡಿದ್ದೆ. ಹಣ ಕೊಟ್ಟಿದ್ದಕ್ಕೆ ನಾರಾಯಣ ಅವರ ಪತ್ನಿ, ತಾಯಿ, ಅತ್ತೆ ಅವರಿಂದ ಒಪ್ಪಂದ ಕರಾರು ಪತ್ರಕ್ಕೆ ಸಹಿ ಮಾಡಿಸಿ, ಆ ಭೂಮಿಗೆ ಜಿಪಿಎ ಸಹ ಮಾಡಿಕೊಟ್ಟಿದ್ದರು.
ಆದರೆ ಕೆಲ ದಿನಗಳ ಬಳಿಕ ನಾರಾಯಣ ರೆಡ್ಡಿ ನೀಡಿದ್ದ ಜಮೀನಿನ ದಾಖಲಾತಿಗಳನ್ನು ಪರಿಶೀಲಿಸಿದಾಗ ಅವುಗಳು ನಕಲು ಎಂಬುದು ನನಗೆ ಗೊತ್ತಾಯಿತು ಎಂದು ಗೂಳಿಹಟ್ಟಿಶೇಖರ್ ಜೂ.26 ರಂದು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದೂರು ನೀಡಿದರು.
ಈ ವ್ಯವಹಾರಕ್ಕೆ ಸಂಬಂಧಿಸಿದಂತೆ ಯಲಚೇನಹಳ್ಳಿ ನಿವಾಸಿ ನಾರಾಯಣರೆಡ್ಡಿ, ಅವರ ಪತ್ನಿ ಭಾಗ್ಯ ಹಾಗೂ ಅವರ ಅತ್ತೆ ಪದ್ಮಾವತಿ ವಿರುದ್ಧ ದೂರುದಾಖಲಿಸಲಾಗಿದೆ.
ಮಾಜಿ ಮಂತ್ರಿ, ಈಗ ಹಾಲಿ ಶಾಸಕರಿಗೆ ಚಳ್ಳೆಹಣ್ಣು ತಿನಿಸುವವರು ಇದ್ದಾರೆ ಎಂದ್ರೆ ಪಾಪ ನಮ್ಮ ನಿಮ್ಮಂತವರ ಪಾಡೇನು ಅಲ್ವ ಅಂತ ಇಲ್ಲೊಬ್ಬರು ಅಂಬೋಣ.!
No comments!
There are no comments yet, but you can be first to comment this article.