ಚಿತ್ರದುರ್ಗ : ೯೦೦ ವರ್ಷಗಳ ಹಿಂದೆ ಬಸವಣ್ಣನವರು ಅಂತರ್‌ಜಾತಿ ವಿವಾಹವನ್ನು ನೆರವೇರಿಸುವ ಮೂಲಕ ಸಾಮಾಜಿಕ ಪರಿವರ್ತನೆ ಮತ್ತು ಸಮಾನತೆಯ ಸಮಾಜದ ಜಾಗೃತಿಯನ್ನು ಮೂಡಿಸಿದರು. ಶ್ರೀಮಠದಲ್ಲೂ ಇಂದು ಜಾತಿ ಧರ್ಮವನ್ನು ಮೀರಿ ಎಲ್ಲರೂ ಒಂದೇ ಎಂಬ ಭಾವನೆಯಿಂದ ವೈಚಾರಿಕತೆಯ ಅಡಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವುದು ಅತೀವ ಸಂತಸದ ವಿಷಯವಾಗಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಬಸವಕೇಂದ್ರ ಶ್ರೀಮುರುಘಾಮಠದಲ್ಲಿ ಎಸ್.ಜೆ.ಎಂ. ಶಾಂತಿ ಮತ್ತು ಪ್ರಗತಿ ಫೌಂಡೇಶನ್ (ರಿ) ಮತ್ತು ಕರ್ನಾಟಕ ಅರಣ್ಯ ಇಲಾಖೆ ಚಿತ್ರದುರ್ಗ ಇವರ ಸಹಯೋಗದಲ್ಲಿ ಇಪ್ಪತ್ತೆಂಟನೇ ವರ್ಷದ ಆರನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ಮತ್ತು ವಿಶ್ವ ಪರಿಸರ ದಿನಾಚರಣೆ ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಗಳು, ಪ್ರಕೃತಿ ವಿಕೋಪದಿಂದ ಹಲವಾರು ಸಮಸ್ಯೆಗಳನ್ನು ನಾವಿಂದು ಎದುರಿಸುತ್ತಿzವೆ. ಶಿಲ್ಲಾಂಗ್‌ನಂತಹ ಪ್ರದೇಶದಲ್ಲಿ ಕುಡಿಯಲು ನೀರು ಸಹ ಸಿಗುತ್ತಿಲ್ಲ. ಜಲದ ಜೊತೆಗೆ ಪರಿಸರ ಜಾಗೃತಿಯನ್ನು ಮೂಡಿಸಬೇಕಾಗಿದೆ. ನೀರನ್ನು ಹಿಂಗಿಸಲು ಹಿಂಗು ಗುಂಡಿಗಳನ್ನು ನಿಮ್ಮ ನಿಮ್ಮ ಪರಿಸರದಲ್ಲಿ ನಿರ್ಮಿಸಿ ಅಂತರ್‌ಜಲ ಅಭಿವೃದ್ದಿಗೆ ಕ್ರಮ ಕೈಗೊಳ್ಳಬೇಕಾಗಿದೆ. ಬಿದ್ದ ನೀರು ಗುಂಡಿ ಇರುವ ಕಡೆಗೆ ಸಹಜವಾಗಿ ಹರಿದು ಹೋಗುವಂತೆ ಜನರೂ ಕೂಡ ಸಮಾಜಮುಖಿಯಾಗಿರುವ ಮಠಗಳ ಕಡೆ ಹರಿದು ಬರುತ್ತಾರೆ. ಜನರು ಪರಿಸರದ ಜೊತೆಗೆ ಹೊಂದಿಕೊಂಡಿರಬೇಕು. ಹಾಗೆಯೇ ನಿಮ್ಮ ಬದುಕಿನಲ್ಲಿ ಕೌಟುಂಬಿಕ ಸಾಮರಸ್ಯ ಮುಖ್ಯವಾಗಿರಬೇಕು. ಹೊಂದಾಣಿಕೆ ಇಲ್ಲದಿದ್ದರೆ ಕುಟುಂಬಗಳು ನ್ಯಾಯಾಲಯದ ಮೆಟ್ಟಿಲೇರುತ್ತವೆ ಎಂದರು.
ಚಿತ್ರದುರ್ಗ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎನ್. ರಾಜಪ್ಪ, ತಮಿಳುನಾಡು ಕುಂಭಕೋಣಂನ ವೆಂಕಟೇಶ್ ಇದೇ ಸಂದರ್ಭದಲ್ಲಿ ೨೮ ನವ ವಧು ವರರು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ವಿಶ್ವ ಪರಿಸರ ದಿನಾಚರಣೆ ನಿಮಿತ್ತ ನವ ವಿವಾಹಿತರು ಸಸಿಗಳನ್ನು ನೆಟ್ಟರು.
ವೇದಿಕೆಯಲ್ಲಿ ಮಂಜುನಾಥ್ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ, ಚಿತ್ರದುರ್ಗ, ಮದುರೈನ ನಿವೃತ್ತ ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ ಎ. ಗಣೇಶ್, ಮದುರೈನ ನ್ಯಾಯವಾದಿ ಜಯಪ್ರಕಾಶ್, ಕುಂಭಕೋಣಂನ ಪೆರಿಯಮಠದ ಕಾರ್‍ಯದರ್ಶಿ ಆರ್.ಟಿ. ಸೆಂದಿಲ್‌ನಾದನ್ ಕಾರ್ಯಕ್ರಮ ದಾಸೋಹಿಗಳಾದ ಶ್ರೀಮತಿ ಸುಜಾತ ಮತ್ತು ಎಂ.ರವಿಕುಮಾರ್, ಶ್ರೀ ರಂಗನಾಥ ಮೋಟಾರ್‍ಸ್, ಮಹೀಂದ್ರ ಅಂಡ್ ಮಹೀಂದ್ರ ಟ್ರಾಕ್ಟರ್ ಡೀಲರ್‍ಸ್, ಚಿತ್ರದುರ್ಗ, ಪೈಲ್ವಾನ್ ತಿಪ್ಪೇಸ್ವಾಮಿ, ಎಸ್.ಜೆ.ಎಂ. ವಿದ್ಯಾಪೀಠದ ಕಾರ್‍ಯನಿರ್ವಹಣಾ ನಿರ್ದೇಶಕ ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ, ಕಾರ್‍ಯನಿರ್ವಹಣಾಧಿಕಾರಿ ಎಂ.ಜಿ. ದೊರೆಸ್ವಾಮಿ ಮುಂತಾದವರಿದ್ದರು.