ಬೆಂಗಳೂರು: ನಾಲ್ವರು ಡಿಸಿಪಿಗಳು, ಕಲಬುರ್ಗಿ, ರಾಯಚೂರು ಎಸ್ಪಿ ಸೇರಿದಂತೆ 17 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕಲಬುರ್ಗಿ ಎಸ್ಪಿ ಇಡಾ ಮಾರ್ಟಿನ್ ಅವರನ್ನು ನಕ್ಸಲ್ ನಿಗ್ರಹ ದಳಕ್ಕೆ ವರ್ಗಾಯಿಸಲಾಗಿದ್ದು, ಅವರ ಜಾಗಕ್ಕೆ ಮರಿಯಂ ಜಾರ್ಜ್ ಅವರನ್ನು ವರ್ಗಾವಣೆ ಮಾಡಲಾಗಿದೆ.

ರಾಯಚೂರು ಎಸ್ಪಿ ಆಗಿದ್ದ ಸಿ.ಬಿ ವೇದಮೂರ್ತಿ ಅವರನ್ನು ಗುಪ್ತದಳಕ್ಕೆ ವರ್ಗಾಯಿಸಲಾಗಿದ್ದು, ಅವರ ಸ್ಥಾನಕ್ಕೆ ನಿಕ್ಕಂ ಪ್ರಕಾಶ್ ಅವರನ್ನು ವರ್ಗಾಯಿಸಲಾಗಿದೆ.