ಮಂಡ್ಯ: ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅಂತ್ಯಕ್ರಿಯೆ ಇಂದು ಹುಟ್ಟೂರು ಮಂಡ್ಯ ಜಿಲ್ಲೆಯ ಪಾಂಡವಪುರದ ಕ್ಯಾತನಹಳ್ಳಿಯಲ್ಲಿ  ನಡೆಯಿತು.

ಅಸಂಖ್ಯಾತ  ರೈತರ ಕಣ್ಣೀರ ನಡುವೆ ಮಣ್ಣಲ್ಲಿ ಮಣ್ಣಾದ ಪುಟ್ಟಣ್ಣಯ್ಯ ಮತ್ತೆ ಹುಟ್ಟಿ ಬರಲಿ . ನೀನು ಅನಿಕೇತ ಎಂಬ ಹಾಡಿನ ನಡುವೆ ಅವರ ಅಂತ್ಯಕ್ರಿಯೆ ನಡೆಯಿತು.

ಕ್ಯಾತನಹಳ್ಳಿ ಗ್ರಾಮದಲ್ಲಿರುವ ತೋಟದಲ್ಲಿ ಎಲ್ಲ ಸಿದ್ಧತೆಗಳು ನಡೆಯುತ್ತಿದೆ. ಗ್ರಾಮಸ್ಥರೆಲ್ಲಾ ಸೇರಿ ಗುಂಡಿ ತೆಗೆಯುತ್ತಿದ್ದಾರೆ. ಈ ನಡುವೆ ರಾಜ್ಯದ 30 ಜಿಲ್ಲೆಗಳಿಂದ ಬಂದ  ಮಣ್ಣಿನಿಂದ ಅಂತ್ಯಕ್ರಿಯೆಗೆ ಸಾಕ್ಷಿ ಆಯಿತು.

ಕ್ಯಾತನಹಳ್ಳಿಯಲ್ಲಿ ಸದ್ಯ ಕ್ಯಾತನಹಳ್ಳಿಯಲ್ಲಿರುವ ಪುಟ್ಟಣ್ಣಯ್ಯ ನಿವಾಸದಲ್ಲಿ ಪಾರ್ಥಿವ ಶರೀರವನ್ನು ಇಡಲಾಗಿತ್ತು. ರಾಜಕೀಯ ನಾಯಕರುಗಳು ಸೇರಿದಂತೆ ತಮ್ಮ ನೆಚ್ಚಿನ ಹೋರಾಟಗಾರನ ಅಂತಿಮ ದರ್ಶನಕ್ಕೆ ಅಭಿಮಾನಿಗಳುಅಂತ್ಯ ಸಂಸ್ಕಾರಕ್ಕೆ ಆಗಮಿಸಿ ನಮನ ಸಲ್ಲಿಸಿದರು.

ಪುಟ್ಟಣ್ಣಯ್ಯ ಮೌಢ್ಯ ವಿರೋಧಿಯಾದ ಕಾರಣ ಯಾವುದೇ ವಿಧಿವಿಧಾನಗಳಿಲ್ಲದ ಅಂತ್ಯಕ್ರಿಯೆಗೆ ಕುಟುಂಬಸ್ಥರು ನಿರ್ಧರಿಸಿದ್ದರಿಂದ  ನಂತರ ತೆಂಗಿನ ತೋಟದಲ್ಲಿ ಅವರ ತಂದೆ ಮತ್ತು ತಾಯಿಯ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ನಡೆಸಲಾಯಿತು.

ಪುಟ್ಟಣ್ಣಯ್ಯರ ಹೋರಾಟದ ಕಿಚ್ಚನ್ನು ಮನದಾಳದಲ್ಲಿಟ್ಟುಕೊಂಡು ಕಂಬನಿ ಮಿಡಿಯುತ್ತಾ ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಎಂಬ ನಿರ್ಧಶನ ಪುಟ್ಟಣ್ಣಯರ ನಿಧನವೇ ಸಾಕ್ಷಿ.!