ಗುವಹಾಟಿ: ಒಂದಲ್ಲ ಎರಡಲ್ಲ ಬರೋಬರಿ 12 ಲಕ್ಷರೂಗಳನ್ನು ಇಲಿಗಳು ತಿಂದು ತೇಗಿ ಬಿಟ್ಟಿರು ಸುದ್ದಿ ಕೇಳಿದ್ರೆ ಶಾಕ ಹಾಗುವ ಸುದ್ದಿ ನಿಮ್ಮದು.

ಅಸ್ಸಾಂನ ತಿನ್ಸುಕಿಯ ಜಿಲ್ಲೆಯಲ್ಲಿನ ಲಾಯ್ಪುಲಿ ಎಂಬಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಮಶೀನಿನೊಳಗಿದ್ದ ಸುಮಾರು 12 ಲಕ್ಷ ರೂ. ಮೌಲ್ಯದ ನೋಟುಗಳನ್ನು ಇಲಿಗಳು ಹರಿದು ಚೂರಾಗಿಸಿವೆ.!

ಎಟಿಎಂ ಅನ್ನು ತಾಂತ್ರಿಕ ವೈಫಲ್ಯದ ಕಾರಣದಿಂದ ಮುಚ್ಚಲಾಗಿತ್ತು. ಆದರೆ ಈ ಎಟಿಎಂ ಕೇಂದ್ರದ ಮುಚ್ಚಿದ ಬಾಗಿಲುಗಳ ಒಳಗೆ ಇಲಿಗಳ ದರ್ಬಾರು ಪ್ರತಿದಿನ ನಡೆಯುತ್ತಿತ್ತು. ಜೂನ್ 11ರಂದು ಎಟಿಎಂ ಮಶೀನಿನ ದುರಸ್ತಿಗೆಂದು ಕೆಲ ಮಂದಿ ಒಳಕ್ಕೆ ಹೋಗಿ ಮಶೀನನ್ನು ಬಿಚ್ಚಿದಾಗ ಒಳಗೆ ರಾಶಿ ರಾಶಿ ನೋಟಿನ ಚೂರುಗಳ ದರ್ಶನ ಕಂಡು ಅವಕ್ ಆಗಿರುವ ಸರದಿ ಅಧಿಕಾರಿಗಳದಾಗಿತ್ತು.!