ತುಮಕೂರು : 10 ಸಾವಿರ ಪದವೀಧರ ಶಿಕ್ಷಕರ ನೇಮಕ ಪ್ರಕ್ರಿಯೆಗೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

ಶಿಕ್ಷಣ ಕ್ಷೇತ್ರದ ಎಂಎಲ್ ಸಿಗಳ ಸಭೆ ನಡೆಸಿದ್ದೇವೆ. ವರ್ಗಾವಣೆ ಕಾನೂನು ತಿದ್ದಪಡಿ ತರುತ್ತಿದ್ದೇವೆ. ಮುಂಬರುವ ಅಧಿವೇಶನದ ವೇಳೆಗೆ ವೈಜ್ಞಾನಿಕ ವರ್ಗಾವಣೆ ಕಾನೂನು ಸಿದ್ಧಪಡಿಸಿ 10 ಸಾವಿರ ಪದವೀಧರ ಶಿಕ್ಷಕರ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ ಎಂದರು.