ನವದೆಹಲಿ: ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಿಗೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮೀಸಲಾತಿ ವಿಸ್ತರಣೆ ಮಾಡಬೇಕೆಂಬ ಶಿಫಾರಸ್ಸಿಗೆ ಕೇಂದ್ರ ಸಚಿವ ಸಂಪುಟವು ಇಂದು ಅನುಮತಿ ನೀಡಿದೆ.

2020ರ ಜನವರಿ 25ರಂದು ಇದರ ಅವಧಿ ಮುಕ್ತಾಯವಾಗಲಿದ್ದು, ಮುಂದಿನ 10 ವರ್ಷಗಳವರೆಗೆ ಇದರ ಅವಧಿಯನ್ನು ವಿಸ್ತರಿಸಲಾಗಿದೆ. ಚಳಿಗಾಲದ ಈ ಅಧಿವೇಶನದಲ್ಲಿ ಇದರ ಮಸೂದೆ ಮಂಡಿಸಲಾಗುವುದು. 2009ರಲ್ಲಿ ಮಾಜಿ ಕಾನೂನು ಸಚಿವ ವೀರಪ್ಪ ಮೊಯ್ಲಿ ಅವರು ಈ ಕಾಯ್ದೆಯನ್ನು(90-50 ತಿದ್ದುಪಡಿ) ಮೊದಲ ಬಾರಿಗೆ ಪರಿಚಯಿಸಲಾಗಿದೆ ಹಾಗಾಗಿ ಇನ್ನೂ 10 ವರ್ಷಗಳ ಕಾಲ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆ ಮೀಸಲಾತಿ ಮುಂದುವರೆಯಲಿದೆ.!