ಬೆಂಗಳೂರು:, ಆಗಸ್ಟ್ ಮೊದಲ ವಾರದಲ್ಲಿ 10ನೇ ತರಗತಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಈ ವೇಳೆ, ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸಂಪ್ಲಿಮೆಂಟರಿ ಪರೀಕ್ಷೆಯನ್ನೂ ನಡೆಸುತ್ತೇವೆ. ಈ ದಿನಾಂಕವನ್ನೂ ಕೂಡ ಫಲಿತಾಂಶ ಪ್ರಕಟಿಸುವ ದಿನದಂದೇ ಘೋಷಿಸಲಾಗುತ್ತದೆ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.