ಚಾಮರಾಜನಗರ : 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿಯೊಂದನ್ನು ನೀಡಿದ್ದು, 1 ರಿಂದ 10 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಧ್ವನಿ ಮುದ್ರಿತ ಪಾಠಗಳು ಸಿದ್ಧವಿದ್ದು, ಶಿಕ್ಷಣ ಇಲಾಖೆಯು ಎರಡು ಚಾನೆಲ್ ಗಳ ಮೂಲಕ ಪ್ರಸಾರ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಶಿಕ್ಷಣಕ್ಕಾಗಿಯೇ ಇಲಾಖೆಯಲ್ಲಿ ಎರಡು ಚಾನೆಲ್ ಗಳಿವೆ. ರೆಗ್ಯುಲರ್ ಶಿಕ್ಷಣಕ್ಕೆ ಪೂರಕವಾಗಿ ಧ್ವನಿಮುದ್ರಿತ ಪಾಠಗಳನ್ನು ಈ ಚಾನೆಲ್ ಗಳ ಮೂಲಕ ಪ್ರಸಾರ ಮಾಡಲ ಕೇಬಲ್ ಅಪರೇಟರ್ ಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಇನ್ನು ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕಾಗಿ ಶಿಕ್ಷಕ ಮಿತ್ರ ಎಂಬ ಹೊಸ ಆಯಪ್ ಸಿದ್ದಪಡಿಸಲಾಗುತ್ತಿದೆ. ಶಿಕ್ಷಕರು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಬಿಇಓ ಅಥವಾ ಡಿಡಿಪಿಐ ಕಚೇರಿಗಳಿಗೆ ಅಲೆಯಬೇಕಿಲ್ಲ. ಈ ಆಯಪ್ ಮೂಲಕವೇ ಅವರ ಸಮಸ್ಯೆ ಪರಿಹರಿಸಲಾಗುದು ಎಂದು ತಿಳಿಸಿದರು.!