ಬೆಂಗಳೂರು: 10ನೇ ತರಗತಿ ಪರೀಕ್ಷೆಗಳು, ಭಾರಿ ಸುರಕ್ಷತಾ ಕ್ರಮಗಳೊಂದಿಗೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಜುಲೈ 13ರಿಂದ ಆರಂಭವಾಗಲಿದ್ದು, ಇದಕ್ಕೂ ಕೂಡ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗಿದೆ.!

55 ವರ್ಷ ಮೇಲ್ಪಟ್ಟ ಶಿಕ್ಷಕರು ಹಾಗೂ ತೀವ್ರತರ ಕಾಯಿಲೆಯಿಂದ ಬಳಲುತ್ತಿರುವ ಶಿಕ್ಷಕರಿಗೆ ಮೌಲ್ಯಮಾಪನ ಕಾರ್ಯದಿಂದ ವಿನಾಯಿತಿ ನೀಡಲು ಸೂಚಿಸಲಾಗಿದ್ದು, ಮೌಲ್ಯಮಾಪನ ನಡೆಯುವ ಕೇಂದ್ರವನ್ನು ಮೂರು ದಿನ ಮೊದಲು ಸಂಪೂರ್ಣವಾಗಿ ಸೋಂಕು ನಿವಾರಕ ಸಿಂಪರಣೆ ಮಾಡುವ ಮೂಲಕ ಸ್ಯಾನಿಟೈಸ್ ಮಾಡಲಾಗುತ್ತದೆ.

ಶಿಕ್ಷಕರನ್ನು ಥರ್ಮಲ್ ಸ್ಕ್ಯಾನಿಂಗ್ ಮಾಡಿದ ಬಳಿಕವೇ ಮೌಲ್ಯಮಾಪನ ಕೊಠಡಿಗೆ ಕಳುಹಿಸಬೇಕೆಂದು ತಿಳಿಸಲಾಗಿದ್ದು, ಒಂದೊಮ್ಮೆ ತಾಪಮಾನ ಹೆಚ್ಚು ಕಂಡುಬಂದಲ್ಲಿ ಕೂಡಲೇ ಮುಖ್ಯ ಮೌಲ್ಯಮಾಪಕರ ಗಮನಕ್ಕೆ ತರಲು ಸೂಚಿಸಲಾಗಿದೆ. ಶಿಕ್ಷಕರು ಕೊಠಡಿಗೆ ತೆರಳುವಾಗ ತಮ್ಮದೇ ಆದ ಕುಡಿಯುವ ನೀರಿನ ಬಾಟಲ್, ಮಾಸ್ಕ್, ಸ್ಯಾನಿಟೈಸರ್ ಹಾಗೂ ಆಹಾರದ ಡಬ್ಬಿಯನ್ನು ತರಲು ತಿಳಿಸಲಾಗಿದೆ.