ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಇದು ಹೊಸದು. ಹೊಸ ಸರ್ಕಾರವಾಗಿರುವುದರಿಂದ ಪೂರಕ ಬಜೆಟ್ ಗಿಂತ ಹೊಸ ಬಜೆಟ್ ನ್ನು ಮಂಡಿಸುವುದು ಒಳ್ಳೆಯದು ಎಂದು ದೇವೇಗೌಡರು ಅಭಿಪ್ರಾಯಪಟ್ಟಿದ್ದಾರಂತೆ.

ಹೊಸ ಸರ್ಕಾರ ರಾಜ್ಯದ ಜನತೆಗೆ ಹೊಸ ಸಂದೇಶ ಕಳುಹಿಸಲು ಹೊಸ ಬಜೆಟ್ ನ ಅವಶ್ಯಕತೆಯಿದೆ. ವಿಧಾನಸಭೆ ಚುನಾವಣೆಗೆ ಮುನ್ನ ಜೆಡಿಎಸ್ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಘೋಷಣೆ ಮಾಡಿದ್ದ ಯೋಜನೆಗಳ ಜಾರಿಗೆ ಹೊಸ ಬಜೆಟ್ ನ ಅವಶ್ಯಕತೆಯಿದೆ, ಅದಕ್ಕೆ ಪೂರಕ ಬಜೆಟ್ ಸಾಕಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರಂತೆ

ಸಮ್ಮಿಶ್ರ ಸರಕಾರದಲ್ಲಿ ಕೆಲವೊಂದು  ಭಿನ್ನಾಭಿಪ್ರಾಯಗಳು ಇರುವುದು ಸಹಜ  ಮುಂದಿನ ದಿನಗಳಲ್ಲಿ ಎಲ್ಲವೂ ಶಮನವಾಗಲಿದ್ದು ರಾಜ್ಯಕ್ಕೆ ಒಳ್ಳೆ ಆಡಳಿತ ನೀಡಲಾಗುತ್ತೆ ಎಂಬ ವಿಶ್ವಾಸ  ಇದೆ ಎಂದು ಹೇಳಿದ್ದಾರಂತೆ.