ಚಿತ್ರದುರ್ಗ :  ಬಿಜೆಪಿಯ ವಿಜಯ ಸಂಕಲ್ಪ ರಾಲಿಯಲ್ಲಿ ನರೇಂದ್ರ ಮೋದಿಯವರು ಹೊಸ ಯುವ ಮತದಾರರನ್ನು ಸೆಳೆಯಲು ಮುಂದಾದರು. ವೀರಮದಕರಿ ನಾಯಕರ ನಾಡಾದ  ಚಿತ್ರದುರ್ಗದ ಬಗ್ಗೆ ಹೆಮ್ಮೆಇದೆ ಸದೃಡ ಸರಕಾರವನ್ನು ಆಯ್ಕೆಮಾಡದಿದ್ದರೆ ಏನಾಗುತ್ತದೆ ಎಂಬುದನ್ನು  ರಾಜ್ಯ ಸರಕಾರವನ್ನು ನೋಡಿದರೆ ಅರ್ಥವಾಗುತ್ತದೆ ಎಂದರು.

ರಿಮೋಟ್ ಸರಕಾರ ಬೇಕೆ ಅಥವಾ ದೇಶವನ್ನು ಆರ್ಥಿಕ ಅಭಿವೃದ್ಧಿಕಡೆ ಕೊಂಡೈಯುವ ಸರಕಾರ ಬೇಕೆ ಎಂದು ಹೇಳುತ್ತಾ, ನೀವು ಹೇಳಿ ನಾನು ಚೌಕಿದಾರ್, ಗ್ರಾಮ ಗ್ರಾಮದಲ್ಲಿ.. ಹಳ್ಳಿ ಹಳ್ಳಿಯಲ್ಲಿ, ಮನೆ ಮನೆಯಲ್ಲಿ ಎಂದು ಹೇಳುತ್ತಿದ್ದಂತೆ ಸಮಾವೇಶಕ್ಕೆ ಬಂದವರು ನಾನು ಚೌಕಿದಾರ್ ಎಂದು ಹೇಳುತ್ತಿದ್ದರು.