ಚಿತ್ರದುರ್ಗ: ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ 2018 ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣೆ ಅಕ್ರಮಗಳನ್ನು (ಹಣ, ಮದ್ಯ, ವಸ್ತು ವಿತರಣೆ) ತಡೆಗಟ್ಟಲು ಸಹಾಯಕ ತೋಟಗಾರಿಕಾ ಅಧಿಕಾರಿ ಕೆ.ಬಿ.ಅನಿತಾ (ದೂರವಾಣಿ ನಂ.7624997583) ಅವರನ್ನು ಎಂ.ಸಿ.ಸಿ. ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವಿ.ವಿ.ಜೋತ್ಸ್ನ ತಿಳಿಸಿದ್ದಾರೆ.
ಈ ಅಧಿಕಾರಿಗಳು ಪ್ರತಿದಿನದ ವರದಿಯನ್ನು ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸಲ್ಲಿಸುವರು.

ಹೊಸದುರ್ಗದಲ್ಲಿ ಕಂಟ್ರೋಲ್ ರೂಂ ಸ್ಥಾಪನೆ

ಚಿತ್ರದುರ್ಗ: ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ 2018 ಹೊಸದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣೆ ಯನ್ನು ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ನಡೆಸಲು, ಅಕ್ರಮ ಚಟುವಟಿಕೆ (ಮದ್ಯ ವಿತರಣೆ) ತಡೆಗಟ್ಟಲು ಅಬಕಾರಿ ನಿರೀಕ್ಷಕರು,, ಹೊಸದುರ್ಗ ವಲಯ ಕಚೇರಿಯಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ. ಸದರಿ ಕಂಟ್ರೋಲ್ ರೂಂ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತದೆ. ಸಾರ್ವಜನಿಕರು ಅಬಕಾರಿ ಅಕ್ರಮಗಳು ಕಂಡುಬಂದರೆ ದೂರವಾಣಿ ನಂ.08199-232100 ಮುಖಾಂತರ ಅಥವಾ ಲಿಖಿತ ದೂರುಗಳನ್ನು ಸಲ್ಲಿಸಬಹುದಾಗಿದೆ ಎಂದು ಹೊಸದುರ್ಗ ವಲಯ ಅಬಕಾರಿ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಂಟ್ರೋಲ್ ರೂಂನಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳ ವಿವರ:- ಎಸ್.ಓಬಣ್ಣ, ಅಬಕಾರಿ ನಿರೀಕ್ಷಕರು, ದೂರವಾಣಿ ನಂ.9880033454, ಹೆಚ್.ಮಂಜುನಾಥ್, ಅಬಕಾರಿ ಉಪನಿರೀಕ್ಷಕರು, ನಂ.01, ದೂರವಾಣಿ.9901621810, ಎ.ಜೆ.,ನಾಗರಾಜ್, ಅಬಕಾರಿ ಉಪನಿರೀಕ್ಷಕರು, ನಂ.02, ದೂರವಾಣಿ. 9980298676.