ಬೆಂಗಳೂರು: ಹೈನುಗಾರಿಕೆ ಮಾಡುವ ರೈತರಿಗೊಂದು ಸಿಹಿ ಸುದ್ದಿ ಏನಪ್ಪ ಅಂದ್ರೆ ಹೈನುಗಾರಿಕೆಗೆ ಉತ್ತೇಜನಕ್ಕಾಗಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ರೈತರು ನೀಡುವ ಹಾಲಿನ ದರ 1 ರೂ. ಹೆಚ್ಚಾಗಲಿದೆ.

ಈ ಮಾತನ್ನು ಹೇಳಿದವರು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್. ಸಿಎಂ ಜೊತೆಗೆ ಚರ್ಚಿಸಿ ಹಾಲು ಉತ್ಪಾದಕರಿಗೆ 1 ರೂ. ದರ ಹೆಚ್ಚಿಸಲು ತೀರ್ಮಾನ ತೆಗೆದುಕೊಳ್ಳುತ್ತೇವೆ. ಪಶು ಭಾಗ್ಯ ಯೋಜನೆಯಿಂದ ಹಾಲು ಉತ್ಪಾದಕ ರೈತರಿಗೆ ಅನುಕೂಲವಾಗುತ್ತಿಲ್ಲ ಎಂಬ ಮಾಹಿತಿಗೆ ಹೆಚ್ಚು ಮಾಡಲಾಗಿದೆ. ಮತ್ತು ಹೆಚ್ಚು ಹಾಲು ಕೊಡುವ ಗಿರ್ ತಳಿಯ ಹಸುಗಳನ್ನು ರೈತರಿಗೆ ನೀಡಲಾಗುವುದು ಎಂದು ಅವರು ಹೇಳಿದರು