ನವದೆಹಲಿ: ಇಡೀ ಜಗತ್ತು ಕೊರೋನಾ ವಿರುದ್ಧ ಹೋರಾಡಲು ಹೈರಾಣಾಗಿರುವ ನಡುವೆ ಭಾರತ ಮತ್ತೊಮ್ಮೆ ಇಡೀ ವಿಶ್ವಕ್ಕೆ ತನ್ನ ಸಾಮರ್ಥ್ಯ ಪ್ರದರ್ಶಿಸಿದೆ.

ದೇಶದಲ್ಲಿ ಕೊರೋನಾ ವಿರುದ್ಧ ಹೋರಾಡಬಲ್ಲ ಲಸಿಕೆ ಸಿದ್ಧಪಡಿಸಲಾಗುತ್ತಿದ್ದು, ಪ್ರಾಯೋಗಿಕ ಪರೀಕ್ಷೆಗಳು ಯಶಸ್ವಿಯಾಗಿವೆ.

ಶೀಘ್ರದಲ್ಲೇ ಈ ಲಸಿಕೆ ವಿಶ್ವದಾದ್ಯಂತ ಜನರ ಪ್ರಾಣ ಉಳಿಸಲು ಸಹಾಯಕವಾಗಲಿದೆ ಎಂದು  ಲಸಿಕೆ ತಯಾರಕಾ ಕಂಪನಿ ಭಾರತ್ ಬಯೋಟೆಕ್ ಅಧ್ಯಕ್ಷ ಡಾ.ಕೃಷ್ಣ ಹೇಳಿದ್ದಾರೆ. ಈ ಲಸಿಕೆಯನ್ನು ಕೋರೋ-ವ್ಯಾಕ್ (‘Coro Vac’) ಎಂದು ಹೆಸರಿಸಲಾಗಿದೆ.