ಬೆಂಗಳೂರು: ದೋಸ್ತಿ ಸರ್ಕಾರ ವರಮಹಾಲಕ್ಷ್ಮಿ ಹಬ್ಬಕ್ಕೆ ಮಹಿಳೆಯರಿಗೆ ಬಂಪರ್ ಆಫರ್ ನೀಡಲು ಮುಂದಾಗಿದೆ.

9 ರಿಂದ 10 ಸಾವಿರ ರೂ. ಬೆಲೆ ಬಾಳುವ ಪ್ರಖ್ಯಾತ ಮೈಸೂರು ಸಿಲ್ಕ್ ಸೀರೆಯನ್ನು ಕೇವಲ 4,500 ರೂ.ಗಳಿಗೆ ಮಾರಾಟ ಮಾಡಲು ತೀರ್ಮಾನಿಸಲಾಗಿದೆಯಂತೆ.!

ರೇಷ್ಮೆ ಸಚಿವ ಸಾ.ರಾ. ಮಹೇಶ್ ಮೈಸೂರಿನಲ್ಲಿಂದು ಈ ವಿಚಾರ ತಿಳಿಸಿದ್ದು, ಮಧ್ಯಮ ವರ್ಗ ಹಾಗೂ ಬಡವರಿಗೂ ಮೈಸೂರು ಸಿಲ್ಕ್ ಸೀರೆ ಲಭ್ಯವಾಗಬೇಕು ಎಂಬ ಕಾರಣಕ್ಕೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಹಾಗಾದರೆ ಇನ್ನೇಕ ತಡ ಹಣ ಜೋಡಿಸಿ ವರಮಹಾಲಕ್ಷ್ಮಿ ಹಬ್ಬಕ್ಕೆ ರೇಷ್ಮೆ ಸೀರೆ ನಿಮ್ಮದಾಗಿಸಿಕೊಳ್ಳಿ

( ಸಾಂದರ್ಭಿಕ ಚಿತ್ರ)