ಬೆಂಗಳೂರು: ಕುಮಾರಸ್ವಾಮಿ ತನ್ನ ಆರೋಗ್ಯವನ್ನೂ ಲೆಕ್ಕಿಸದೇ 18 ಗಂಟೆ ಕೆಲಸ ಮಾಡ್ತಾರೆ, ಅವರ ಆರೋಗ್ಯದ ಬಗ್ಗೆ ನನಗೆ ಆತಂಕ ಇದೆ ಎಂದು ದೇವೇಗವಡರು ಹೇಳಿದ್ದಾರೆ.

ನಿನ್ನೆ ನಡೆದ ಜೆಡಿಎಸ್  ಕಾರ್ಯಕ್ರದಲ್ಲಿ ಮಾತನಾಡಿದ ಅವರು ರೈತರ ಸಾಲ ಮನ್ನಾಪೈಕಿ ಈ ಹಿಂದಿನ ಸರ್ಕಾರ ಬಿಟ್ಟು ಹೋಗಿರುವ 4000 ಕೋಟಿ ರೂಪಾಯಿ ಸಾಲ ತೀರಿಸುವ ಹೊಣೆಗಾರಿಕೆ ಸಿಎಂ ಕುಮಾರಸ್ವಾಮಿ ಮೇಲಿದೆ ಆದರೆ ಎಲ್ಲವನ್ನು ನಿಭಾಯಿಸುವ ಶಕ್ತಿ ಇದೆ ಎಂದು ಹೇಳಿದರು.