ತುಮಕೂರು: ಜೆಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿಯಲ್ಲಿ ಗೆದ್ದ ಮಹಿಳೆಯರ ಅಧಿಕಾರವನ್ನು ಗಂಡಂದಿರು ಚಲಾಯಿಸಿರುವ ಸುದ್ದಿ ಕೇಳಿತ್ತೀರ ಆದ್ರೆ ಇದು ಉಲ್ಟಾ.! ಶಾಸಕ ವಿದೇಶದಲ್ಲಿದ್ದಾಗ ಹೆಂಡತಿ ಅಧಿಕಾರ ಚಲಾಯಿಸಿರುವ ಸುದ್ದಿ ನೋಡಿ.!

ಕುಣಿಗಲ್ ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ವಿದೇಶ ಪ್ರವಾಸದಲ್ಲಿದ್ದಾರೆ. ಈ ಸಮಯದಲ್ಲಿ ಶಾಸಕರ ಪತ್ನಿ ಸುಮಾ ಕ್ಷೇತ್ರ ಪ್ರವಾಸದಲ್ಲಿ ತೊಡಗಿದ್ದಾರೆ. ಪತಿಯ ಅನುಪಸ್ಥಿತಿಯಲ್ಲಿ ಸುಮಾ ರಂಗನಾಥ್ ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಸ್ಪತ್ರೆಯಲ್ಲಿನ ಕುಂದು ಕೊರತೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.

ಸುಮಾ ರಂಗನಾಥ್ ಕುಣಿಗಲ್​ ಸರ್ಕಾರಿ ಆಸ್ಪತ್ರೆಗೆ ಭೇಟಿ ಕೊಟ್ಟು ಪರಶೀಲಿಸಿ, ಕುಂದು ಕೊರತೆ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿ ಸಂಗ್ರಹಿಸಿದ್ದಾರೆ..

ದಿಢೀರ್ ಭೇಟಿ ನೀಡಿದ ಶಾಸಕರ ಪತ್ನಿಗೆ ಅಧಿಕಾರಿಗಳು ಎಲ್ಲಾ ಮಾಹಿತಿ ನೀಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನಾನೂ ಜನರಲ್ಲಿ ಮತಯಾಚನೆ ಮಾಡಿದ್ದೇನೆ. ಹಾಗಾಗಿ ಜನರು ನಮ್ಮನ್ನು ಗೆಲ್ಲಿಸಿದ್ದಾರೆ. ಜನರ ಸಮಸ್ಯೆ ಆಲಿಸಿ ಋಣ ತೀರಿಸಲು ಬಂದಿದ್ದೇನೆ ಎಂದು ತಿಳಿಸಿದ್ದಾರೆ. ಆದರೆ, ಪತಿಯ ಅಧಿಕಾರ ಚಲಾಯಿಸಿದ ಸುಮಾ ನಡೆಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಹೀಗಿದೆ ನಮ್ಮ ಡೆಮಾಕ್ರಸಿ ಅಂತ ಮೂಗಿನ ಮೇಲೆ ಬೆಳ್ಳು ಇಟ್ಟುಕೊಳ್ಳಬೇಡಿ. ಪ್ರಜಾಪ್ರಭುತ್ವದಲ್ಲಿ ಇದೆಲ್ಲಾ ಕಾಮನ್ ಅಲ್ವೆ.!