ಹುಣಿಸೆ ಹಣ್ಣು ಯಾರಾದ್ರು ತಿನ್ನುತ್ತಿದ್ರೆ ಯಾರಿಗಾದರೂ ಬಾಯಲ್ಲಿ ನೀರುರುತ್ತೆ. ಅಲ್ವ. ಇನ್ನು ಒಂದು ಮಾತು ಇದೆ ಏ ಹುಣ್ಣುಸೆ ಮರದ ಕೆಳಗೆ ಕುಳಿತು ಕೊಳ್ಳ ಬೇಡ ಏಕೆಂದ್ರೆ ಆಮ್ಲಜನಕ ಕಡಿಮೆ ಇರುತ್ತೆ ಅಂತ ಹೇಳುವವರನ್ನು ಕೇಳಿರುತ್ತಿರ. ಅದು ಬಿಡಿ ಹುಣುಸೆ ಹಣ್ಣು ಕೆಲವೊಂದು ಸಲ ಔಷಧಿಯಾಗಿ ಕೆಲಸ ಮಾಡುತ್ತೆ.!

ಹುಣಸೆಹಣ್ಣು ತೂಕ ಇಳಿಸಿಕೊಳ್ಳಲು ಔಷಧಿಯಾಗಿಯೂ ಕಾರ್ಯನಿರ್ವಹಿಸುತ್ತದೆ. ಹುಣಸೆಹಣ್ಣು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಮಲಬದ್ಧತೆ. ಆಮ್ಲೀಯತೆ, ಗ್ಯಾಸ್ ಮತ್ತು ಅಲ್ಸರ್ಗಳಂತಹ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹುಣಸೆ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಾಲಿಫಿನಾಲ್ ಮತ್ತು ಫ್ಲೇವನಾಯ್ಡ್ ಅಂಶಗಳು ಕಂಡು ಬರುತ್ತವೆ. ಇದಲ್ಲದೇ ಹುಣಸೆ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆಯಂತೆ.!