ಚಿತ್ರದುರ್ಗ: ಮಾಟ ಮಂತ್ರದಿಂದ ಇಬ್ಬರು ಯುವತಿಯರನ್ನು ತಮ್ಮ ಹತ್ತಿರ ಸೆಳೆದು, ಮತ್ತು ಬರಿಸುವ ಔಷಧ ನೀಡಿ ಅಶ್ಲೀಲ ಫೋಟೋಗಳನ್ನು ತೆಗೆದು ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪ ಕೇಳಿ ಬಂದಿದೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಭರಮಸಾಗರದಲ್ಲಿ ನಡೆದಿದ್ದು, ಆರೋಪಿ ಅಪ್ಪ ಶರಣಪ್ಪ(50) ಹಾಗೂ ಮಗ ಭಾಸ್ಕರ್(21) ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ದೂರು ದಾಖಲಾಗಿದ್ದು, ಪೊಲೀಸರು ಓರ್ವ ಬಾಲಕಿ ಮತ್ತು ಯುವತಿಯನ್ನು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.!