ಚಿತ್ರದುರ್ಗ: ಜಿಲ್ಲೆಗೆ ಹೊಸದಾಗಿ ಬಂದ ಜಿಲ್ಲಾಧಿಕಾರಿ ವಸಿರೆಡ್ಡಿ ವಿಜಯ ಜೋತ್ಸ್ನ ಅವರನ್ನು ನೋಡಿ ಕೆಲ ಅಧಿಕಾರಿಗಳು ಕಲೆಯಬೇಕಾದ್ದು ಬಹಳಷ್ಟು ಇದೆ.

ಬಹುತೇಕ ಆಯಕಟ್ಟಿನ ಅಧಿಕಾರಿಗಳು ಕೆಲಸಮಾಡಿಕೊಟ್ಟರೆ ತಮಗೇನು ಲಾಭ ಅಂತ ಲೆಕ್ಕಾಹಾಕುತ್ತಾರೆ. ಹೆಂಡತಿ ಮಕ್ಕಳಿಗಾಗಿ ಕೋಟಿ ಕೋಟಿಗಳಿಸಲು ರಾತ್ರಿ ಹಗಲು ಕಣ್ಣೀಗೆ ಎಣ್ಣೆ(ಹೊಟ್ಟೆಗೆ) ಬಿಟ್ಟುಕೊಂಡು ದಂಧೆ ಮಾಡಲು ಮುಂದಾಗುತ್ತಾರೆ. ನಾಡು- ನುಡಿ ದೇಶ ಜನರು ಯಾವುದು ಅವರಿಗೆ ಬೇಡ.

ದುಡ್ಡಂದೇ ಸರ್ವಸ್ವ. ಅಂತ ಹಣ ಮಾಡಲು ಮುಂದಾಗುತ್ತಾರೆ. ಆದ್ರೆ ದುರ್ಗದ ಜಿಲ್ಲಾಧಿಕಾರಿ ವಸಿರೆಡ್ಡಿ ವಿಜಯ ಜೋತ್ಸ್ನ ಅವರನ್ನು ನೋಡಿ ಅಧಿಕಾರಿಗಳು ರಾಜಕಾರಣಿಗಳು ಕಲೆಯಬೇಕಾದ್ದು ಬಹಳಷ್ಟು ಇದೆ.

ಏಕೆಂದ್ರೆ ಜಿಲ್ಲಾಧಿಕಾರಿ ವಸಿರೆಡ್ಡಿ ವಿಜಯ ಜೋತ್ಸ್ನ ಮತ್ತು ಅವರ ಪತಿ ಹರೀಶ್ ವಾಸಿರೆಡ್ಡಿಯವರು ತಮ್ಮ ದೇಹದ ಎಲ್ಲಾ  ಅಂಗಾಂಗಗಳನ್ನು ಸಮಾಜಕ್ಕೆ ದಾನ ಮಾಡಿದ್ದಾರೆ.

ಇಂದು ಸಂಜೆ ಅವರ ಬಂಗಲೆಯಲ್ಲಿ ತಮ್ಮ ಮಗ ಆದಿತ್ಯನ ಐದನೇ ವರ್ಷದ ಹುಟ್ಟು ಹಬ್ಬದ ಸಮಾರಂಭದಲ್ಲಿ ದಂಪತಿಗಳಿಬ್ಬರೂ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಗೆ ಪತ್ರಕ್ಕೆ ಸಹಿ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ.  ತಮ್ಮ ಅಂಗಾಂಗಗಳನ್ನು ದಾನ ಮಾಡುವುದರಿಂದ  ಕನಿಷ್ಠ ಎಂಟು ಜನರಿಗೆ ಮರು ಜನ್ಮ ನೀಡಬಹುದಾಗಿದೆ.

ಮರಣದ ನಂತರ ದೇಹ ಬೆಂಕಿಯಲ್ಲಿ ಸುಡುವುದರ ಬದಲಿಗೆ  ಅಂಗಾಂಗಗಳನ್ನು ದಾನ ಮಾಡುವುದರಿಂದ ಅನೇಕ ಜೀವಗಳನ್ನು ಉಳಿಸಬಹುದಾಗಿದೆ ಎಂದು ಡಿ.ಸಿ. ಹೇಳಿದ್ದಾರೆ.

ಈ ವೇಳೆಯಲ್ಲಿ ಜಿಲ್ಲಾ ನ್ಯಾಯಾಧೀಶರಾದ ಎಸ್. ಬಿ.ವಸ್ತ್ರಮಠರವರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಾಗಿದ್ದರು.

ಜಿಲ್ಲಾಧಿಕಾರಿ ಮಾತನಾಡಿದ ವಿಡಿಯೊ ಬಿಸಿ ಸುದ್ದಿ( ಯ್ಯೂ ಟೂಬ್ ನಲ್ಲಿ ನೋಡಿ. Bcsuddi.com)