ಬೆಂಗಳೂರು: ರಾಜ್ಯ ಸರ್ಕಾರ ಅಧಿಕಾರಿ ವರ್ಗದಲ್ಲಿ ಮೇಜರ್ ಸರ್ಜರಿ ಮಾಡಿದ್ದು,  ಹಲವು ಹಿರಿಯ-ಕಿರಿಯ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದ್ದು ವರ್ಗಾವಣೆ ಆದವರು ಮತ್ತು ಯಾವ ಪ್ಲೇಸ್ ಎಂಬುದು ಇಲ್ಲಿದೆ.

 

 • ಜಾವಿದ್ ಅಖ್ತರ್- ಪ್ರಧಾನ ಕಾರ್ಯದರ್ಶಿ- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವ್ಯವಸ್ಥಾಪಕ ನಿರ್ದೇಶಕರು, ಕೆಪಿಟಿಸಿಎಲ್.
 • ಡಾ.ಎನ್.ನಾಗಾಂಬಿಕಾ ದೇವಿ- ಪ್ರಧಾನ ಕಾರ್ಯದರ್ಶಿ- ಸಹಕಾರ ಇಲಾಖೆ.
 • ಎಲ್.ಕೆ.ಅತಿಕ್- ಪ್ರಧಾನ ಕಾರ್ಯದರ್ಶಿ- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್.
 • ಅಂಜುಂ ಫರ್ವೇಜ್- ಕಾರ್ಯದರ್ಶಿ- ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ.
 • ನವೀನ್‍ರಾಜ್ ಸಿಂಗ್- ವ್ಯವಸ್ಥಾಪಕ ನಿರ್ದೇಶಕರು- ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮ.
 • ಸುಬೋಧ್ ಯಾದವ್- ಕಾರ್ಯದರ್ಶಿ- ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ ಪ್ರಾದೇಶಿಕ ಆಯುಕ್ತರು ಕಲಬುರಗಿ ವಿಭಾಗ.
 • ಪಂಕಜ್‍ಕುಮಾರ್ ಪಾಂಡೆ- ಆಯುಕ್ತರು- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಆಯುಷ್ ಸೇವೆ. ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರ ಜತೆಗೆ ವಾರ್ತಾ ಇಲಾಖೆ ಕಾರ್ಯದರ್ಶಿ.
 • ರೋಹಿಣಿ ಸಿಂಧೂರಿ ದಾಸರಿ- ಜಿಲ್ಲಾಧಿಕಾರಿ- ಹಾಸನ.
 • ಡಾ.ಬಿ.ಆರ್.ಮಮತಾ- ನಿರ್ದೇಶಕರು- ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್.
 • ನಳಿನಿ ಅತುಲ್- ಸಿಇಒ- ರಾಯಚೂರು ಜಿಲ್ಲಾ ಪಂಚಾಯತ್.
 • ಶಿಲ್ಪಾಶರ್ಮಾ- ಸಹಾಯಕ ಆಯುಕ್ತರು- ರಾಯಚೂರು ಉಪವಿಭಾಗ.
 • ಎಂ.ಆರ್.ರವಿಕುಮಾರ್- ಆಯುಕ್ತರು- ಮೈಸೂರು ಮಹಾನಗರ ಪಾಲಿಕೆ.
 • ಕೆ.ಎಂ.ಜಾನಕಿ- ವ್ಯವಸ್ಥಾಪಕ ನಿರ್ದೇಶಕರು- ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ನಿಗಮ
 • ಡಾ.ಜೆ.ರವಿಶಂಕರ್- ವ್ಯವಸ್ಥಾಪಕ ನಿರ್ದೇಶಕರು- ಕರ್ನಾಟಕ ನಗರ ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯವಸ್ಥಾಪಕರು (ಕೆಡಬ್ಲ್ಯೂಎಸ್‍ಎಸ್‍ಬಿ).
 • ಸಿ.ಕೆ.ಜಾಫರ್- ಆಯುಕ್ತರು- ಸಾರ್ವಜನಿಕ ಶಿಕ್ಷಣ ಇಲಾಖೆ.
 • ಗುಂಜಂ ಕೃಷ್ಣ- ವ್ಯವಸ್ಥಾಪಕ ನಿರ್ದೇಶಕರು- ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ಮಂಡಳಿ.
 • ಡಾ.ರಣದೀಪ್- ಹೆಚ್ಚುವರಿ ಆಯುಕ್ತರು ಬಿಬಿಎಂಪಿ.
 • ಎಸ್.ಪಿ.ಇಕ್ಕೇರಿ- ಆಯುಕ್ತರು- ಸಾರಿಗೆ ಮತ್ತು ರಸ್ತೆ ಸುರಕ್ಷತೆ.
 • ಎಂ.ದೀಪಾ- ಜಿಲ್ಲಾಧಿಕಾರಿ- ಧಾರವಾಡ.
 • ಸುಷ್ಮಾ ಗೋಡ್ಪಳೆ- ವಿಶೇಷ ಜಿಲ್ಲಾಧಿಕಾರಿ- ಬೆಂಗಳೂರು ನಗರ ಜಿಲ್ಲೆ
 • ಡಾ.ಎಸ್.ಪಿ.ಬೊಮ್ಮನಹಳ್ಳಿ- ಪ್ರಧಾನ ವ್ಯವಸ್ಥಾಪಕರು- ಕೃಷ್ಣಾ ಮೇಲ್ದಂಡೆ ಯೋಜನೆ.
 • ಅಜಯ್‍ಸೇಠ್- ವ್ಯವಸ್ಥಾಪಕ ನಿರ್ದೇಶಕರು- ಬೆಂಗಳೂರು ಮೆಟ್ರೋ.