ಚಿತ್ರದುರ್ಗ: ರಾಜ್ಯದ ಪ್ರಮುಖ ಗಣಪತಿಗಳ ಪೈಕಿ ಅತ್ಯಂತ ಹೆಸರುವಾಸಿಯಾಗಿರುವ ನಗರದ ಹಿಂದೂ ಮಹಾಗಣಪತಿಯು ಮೂರ್ತಿಯನ್ನು ಸಕಲ ಸಂಪ್ರದಾಯಗಳೊಂದಿಗೆ ನೆರವೇರಿಸಲಾಯಿತು.

ಪ್ರತಿಷ್ಠಾಪನೆಗೆ ಮಾದಾರ ಗುರುಪೀಠದ ಪೀಠಾಧ್ಯಕ್ಷರಾದ ಮಾದಾರ ಚನ್ನಯ್ಯ ಸ್ವಾಮೀಜಿಗಳು ಸಾನಿಧ್ಯವಹಿಸಿದ್ದರು. ಪ್ರತಿಷ್ಠಾಪನೆಯ ಬಳಿಕ ಸಾವಿರಾರು ಭಕ್ತರು ಬೆಳಗ್ಗಿನಿಂದಲೇ ಸರದಿ ಸಾಲಿನಿಲ್ಲಿ ನಿಂತು ಬೃಹತ್ ಗಣಪನ ದರ್ಶನ ಪಡೆದುಕೊಂಡರು.

ಒಟ್ಟು 15 ದಿನಗಳ ಕಾಲ ಭಕ್ತರು ಪೂಜೆ ಸಲ್ಲಿಸಿದ್ದು, ಬಳಿಕ ಗಣಪನನ್ನು ಬೃಹತ್ ಶೋಭಾಯಾತ್ರೆಯ ಮೂಲಕ ಚಂದ್ರವಳ್ಳಿಯ ಕೆರೆಯಲ್ಲಿ ವಿಸರ್ಜನೆ ಮಾಡಲಾಗುತ್ತದೆ.