ಚಿತ್ರದುರ್ಗ:  ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆಗೆ ಚಾಲನೆ ಸಿಕ್ಕಿದ್ದು, ಶೋಭಾಯಾತ್ರೆಗೆ ಹರಿದು ಬಂತು ಭಕ್ತಸಾಗರ.

ಬಜರಂಗ ದಳ ಹಾಗೂ ವಿಶ್ವ ಹಿಂದೂ ಪರಿಷತ್ ಪ್ರತಿಷ್ಠಾಪಿಸಿದ  ಹಿಂದೂ ಮಹಾಗಣತಿ ಶೋಭಾಯಾತ್ರೆಯನ್ನು ವಿಶ್ವ ಹಿಂದೂ ಪರಿಷತ್ ಪ್ರಾಂತ್ಯ ಸಂಚಾಲಕಿ ಡಾ. ವಿಜಯಲಕ್ಷ್ಮಿ ಚಾಲನೆ ನೀಡಿದರು. ಮಾದರ ಚೆನ್ನಯ್ಯ ಸ್ವಾಮೀಜಿ ಸೇರಿದಂತೆ ಬಹುತೇಕ ಸ್ವಾಮೀಜಿಗಳು ಭಾಗವಹಿಸಿದ್ದರು.

ಬಿಡಿ ರಸ್ತೆ ತುಂಬೆಲ್ಲಾ ಕೇಸರಿ ಬಾವುಟಗಳು ಸುಂದರವಾಗಿ ಡೆಕೊರೇಟ್ ಮಾಡಲಾಗಿತ್ತು. ಹುಡುಗರು ಮುಪ್ಪರು ಸೇರಿದಂತೆ ನಗರದ ಜನರು ಭಾಗವಹಿಸಿದ್ದರು. ಯುವಕರು ನಾದಕ್ಕೆ ತಕ್ಕಂತೆ ಹೆಜ್ಜೆಹಾಕುವ ದೃಶ್ಯವನ್ನು ಜನರನ್ನು ನೋಡಿ ಕಣ್ಣುತುಂಬಿಕೊಂಡರು.