ಬೆಂಗಳೂರು: ಹಾಲು ಉತ್ಪಾದಕರಿಗೆ 2 ರೂಕಡಿತ ಗ್ರಾಹಕರಿಗಿಲ್ಲ ಹಾಲಿನ ದರ ಇಳಿಕೆ ಏಕೆಂದರೆ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿಯ ನಾನಾ ಒಕ್ಕೂಟಗಳು ಹಾಲು ಉತ್ಪಾದಕರಿಂದ ಖರೀದಿಸುವ ದರದಲ್ಲಿ ಲೀಟರ್ ಗೆ 2 ರೂ. ವರೆಗೆ ಕಡಿತ ಮಾಡಿದ್ದು, ಜೂನ್ 1 ರಿಂದಲೇ ಜಾರಿಗೆ ಬಂದಿದೆ.

ಹಾಲು ಉತ್ಪಾದನೆ ಹೆಚ್ಚಳ ಜಾಸ್ತಿ ಆಗಬೇಕೆಂದು ಸರ್ಕಾರ ಪ್ರತಿ ಲೀಟರ್ ಹಾಲಿಗೆ 5 ರೂ. ಪ್ರೋತ್ಸಾಹಧನ ಕೊಡುತ್ತಿದೆ. ಆದರೆ ಹೆಚ್ಚು ಉತ್ಪಾದನೆಯಾದರೆ ಹಾಲು ನಿರ್ವಹಣೆ ಮಾಡುವುದು ಕಷ್ಟ ಎಂದು ಹಾಲು ಒಕ್ಕೂಟಗಳು ದರ ಇಳಿಕೆ ಮಾಡಿರುವುದು ಹೈನುಗಾರಿಕೆ ನೆಚ್ಚಿಕೊಂಡಿರುವ ಕುಟುಂಬಗಳಿಗೆ ಆಘಾತವಾಗಿದೆ. ಗ್ರಾಹಕರಿಗೆ ಮಾರಾಟ ಮಾಡುವ ಹಾಲಿನ ದರದಲ್ಲಿ ಇಳಿಕೆ ಆಗಿಲ್ಲ ಎಂಬುದು ಗ್ರಾಹಕರ ಅಳಲು.!