ಬೆಂಗಳೂರು: ಕೇಂದ್ರ ಸರಕಾರದ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ ಹಾಲು ಉತ್ಪಾದಕರಿಗೆ ನೀಡಲಾಗುತ್ತದೆ.!

ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ 3 ಲಕ್ಷ ರೂ. ವರೆಗೆ ಕೃಷಿ ಸಾಲ ನೀಡುವ ಕೇಂದ್ರ ಸರ್ಕಾರದ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಹಾಲು ಉತ್ಪಾದಕರಿಗೆ ವಿಸ್ತರಿಸಲಾಗಿದೆ.

ಗರಿಷ್ಠ 1.6 ಲಕ್ಷ ರೂ.ವರೆಗೆ ಆಧಾರರಹಿತ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

3 ಲಕ್ಷ ರೂ.ವರೆಗೆ ಶೇ. 4ರ ಬಡ್ಡಿ ಹಾಗೂ ಆಧಾರ ರಹಿತ ಸಾಲ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.!