ಬೆಳಗಾವಿ : ರಾಜ್ಯದಲ್ಲಿ 12 ಲಕ್ಷ ಹಸು, ಎಮ್ಮೆಗಳಿಗೆ ವಿಮೆ ಭದ್ರತೆ ಒದಗಿಸಲಾಗುವುದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭದಲ್ಲಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ, ವಿಮೆ ಭದ್ರತೆ ಯೋಜನೆಯಡಿ ಹಸು ಅಥವಾ ಎಮ್ಮೆ ಮೃತಪಟ್ಟರೆ ಅದರ ಮಾಲೀಕರಿಗೆ 40 ರಿಂದ 50 ಸಾವಿರ ರೂ. ಸಿಗಲಿದೆ ಎಂದರು.

ರಾಜ್ಯದಲ್ಲಿರುವ 14 ಹಾಲು ಒಕ್ಕೂಟಗಳು ಹಾಗೂ ಕೆಎಂಎಫ್ ಮೂಲಕ 1,000 ಜನರಿಗೆ ಉದ್ಯೋಗ ನೀಡಲಾಗುವುದು. ಕೆಎಂಎಫ್ ವಾರ್ಷಿಕ ವಹಿವಾಟು 15 ಸಾವಿರ ಕೋಟಿ ಇದೆ. ಇದನ್ನು ಮುಂದಿನ 4 ವರ್ಷಗಳ ಅವಧಿಯಲ್ಲಿ 25 ಸಾವಿರ ಕೋಟಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದರು.