ಬೆಂಗಳೂರು: ‘ಹಾಯ್ ಬೆಂಗಳೂರು’ ವಾರಪತ್ರಿಕೆ ಸಂಪಾದಕ ಹಾಗೂ ‘ಓ ಮನಸೇ’ ಪಾಕ್ಷಿಕ ಪತ್ರಿಕೆಯ ಸಂಪಾದಕರೂ ಬಹುಮುಖ ಪ್ರತಿಭೆ ರವಿ ಬೆಳೆಗೆರೆ ಇನ್ನಿಲ್ಲ.

ರವಿ ಬೆಳಗೆರೆ ಅವರು ಶುಕ್ರವಾರ ಮುಂಜಾನೆ ನಿಧನ ಹೊಂದಿದರು. ತಡರಾತ್ರಿ ಹೃದಯಾಘಾತಕ್ಕೆ ಒಳಗಾದ ಅವರನ್ನು ತಕ್ಷಣ ಆಸ್ಪತ್ರೆ ದಾಖಲಿಸಲಾಯಿತಾದರೂ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು. ಪಾರ್ಥಿವ ಶರೀರವನ್ನು ಇಂದು ಅಂತಿಮ ದರ್ಶನಕ್ಕೆ ಇಡಲಾಗುವುದು.

ಇವರು ಪತ್ನಿಯರಾದ ಲಲಿತಾ, ಯಶೋಮತಿ, ಮಕ್ಕಳಾದ ಚೇತನಾ, ಭಾವನಾ, ಕರ್ಣ ಹಾಗೂ ಹಿಮವಂತ ಸೇರಿ ಅಪಾರ ಬಂಧು-ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ.

ಹಾಯ್ ಬೆಂಗಳೂರು ಸಂಪಾದಕರಾಗುವ ಮೊದಲು ಕರ್ಮವೀರ, ಸಂಯುಕ್ತ ಕರ್ನಾಟಕ, ಕಸ್ತೂರಿ, ಲಂಕೇಶ್ ಪತ್ರಿಕೆಗಳಿಗೆ ಬರೆಯುತ್ತಿದ್ದರು. 15 ಮಾರ್ಚ್ 1958 ರಲ್ಲಿ ಬಳ್ಳಾರಿಯಲ್ಲಿ ಜನಿಸಿದ ರವಿಬೆಳಗೆರೆ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ. ಅವರ ಪ್ರಮುಖ ಕೃತಿಗಳು ಹಿಮಾಲಯನ್ ಬ್ಲಂಡರ್, ಭೀಮಾ ತೀರದ ಹಂತಕರು, ನೀ ಹಿಂಗ ನೋಡಬೇಡ ನನ್ನ, ಡಿ ಕಂಪನಿ, ಇಂದಿರೆಯ ಮಗ ಸಂಜಯ, ಕಲ್ಪನಾವಿಲಾಸ, ಗೋಲಿಬಾರ್, ಕಾದಂಬರಿ, ಮಾಟಗಾತಿ, ಸರ್ವ ಸಂಬಂಧ, ಗಾಡ್ ಫಾದರ್, ಕಾಮರಾಜ ಮಾರ್ಗ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಇವುಗಳೊಂದಿಗೆ ಕಾರ್ಗಿಲ್ ನಲ್ಲಿ ಹದಿನೇಳು ದಿನ, ಪಾಪಿಗಳ ಲೋಕದಲ್ಲಿ ರವಿಬೆಳಗೆರೆಯ ಲೇಖನಿಯಿಂದ ಮೂಡಿಬಂದಿವೆ.