ಶಿವಮೊಗ್ಗ : ನಗರದಲ್ಲಿ ಮಚ್ಚು, ಲಾಂಗ್ ಗಳು ಸದ್ದು ಮಾಡಿವೆ. ನಗರದಲ್ಲಿ ಹಾಡು ಹಗಲೇ, ರೌಡಿಶೀಟರ್ ಹತ್ಯೆ ಮಾಡಿದ್ದಾರೆ.

ಶಿವಮೊಗ್ಗದ ಬಸವನಗುಡಿ ಬಡಾವಣೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಂತ ರೌಡಿ ಶೀಟರ್ ಮಂಜುನಾಥ್ ಭಂಡಾರಿ(30) ಎಂಬಾತನನ್ನು ದ್ವಿಚಕ್ರ ವಾಹನದಲ್ಲಿ ಬಂದ ಮೂವರು ದುಷ್ಕರ್ಮಿಗಳು, ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಹಾಡ ಹಗಲೇ ನಡೆದಂತ ಕೊಲೆಯಿಂದಾಗಿ, ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಜನರು ಬೆಚ್ಚಿ ಬಿದ್ದಿದ್ದಾರೆ. ಇದೀಗ ಘಟನಾ ಸ್ಥಳಕ್ಕೆ ಆಗಮಿಸಿದಂತ ಎಸ್ ಪಿ ಶಾಂತರಾಜು ಪರೀಶಿಲನೆ ನಡೆಸಿದ್ದಾರೆ