ರಾಯಚೂರು: ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಹಳ್ಳಕ್ಕೆ ಬಿದ್ದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 20 ಜನ ಗಾಯಗೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಹೆಸರೂರು ಹತ್ತಿರ ನಡೆದಿದೆ.

ಅಪಘಾತದಲ್ಲಿ ಒಂದು ಮಗು ಸೇರಿ ಇಬ್ಬರು ಮಹಿಳೆಯರು ಕೊನೆಯುಸಿರೆಳೆದಿದ್ದಾರೆ. 45 ವರ್ಷದ ನರಸಮ್ಮ ಸಾವನ್ನಪ್ಪಿದ ಮಹಿಳೆ. ಮತ್ತಿಬ್ಬರ ಹೆಸರು ತಿಳಿದುಬಂದಿಲ್ಲ. ಗಾಯಗೊಂಡವರನ್ನು ತಾಲೂಕಾಸ್ಪತ್ರೆಗೆ ಸಾಗಿಸಲಾಗಿದೆ. ಲಿಂಗಸುಗೂರಿನ ಹಟ್ಟಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.