ಚಿತ್ರದುರ್ಗ: ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ಜಾರಿಗೊಳಿಸಿರುವ ಎನ್.ಪಿ.ಎಸ್ ಯೋಜನೆಯನ್ನು ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಲು ಆಗ್ರಹಿಸಿ ಪ್ರೀಡಂ ಪಾರ್ಕ್ ಚಲೋ ಹಮ್ಮಿಕೊಂಡಿರುವುದಾಗಿ ಚಿತ್ರದುರ್ಗ ಸರ್ಕಾರಿ ಎನ್.ಪಿ.ಎಸ್ ನೌಕರ ಸಂಘದ ಜಿಲ್ಲಾಧ್ಯಕ್ಷರಾದ, ಡಾ. ಎಸ್.ಆರ್.ಲೇಪಾಕ್ಷ ತಿಳಿಸಿದ್ದಾರೆ.

ಈ ಬಗ್ಗೆ ಹೇಳಿಕೆಯನ್ನು ನೀಡಿರುವ ಅವರು, ದಿನಾಂಕ: 01-04-2006 ರಂದು ನೂತನ ಪಿಂಚಣಿ ಯೋಜನೆಯನ್ನ ಸರ್ಕಾರವು ಜಾರಿಗೊಳಿಸಿದ್ದು ಇದು ಸರ್ಕಾರಿ ನೌಕರರಿಗೆ ಮರಣ ಶಾಸನವಾಗಿದೆ. ಸರ್ಕಾರಿ ನೌಕರನಿಗೆ ನಿವೃತ್ತಿಯ ನಂತರ ಹಾಗೂ ಸೇವೆಯಲ್ಲಿರುವ ಸಂದರ್ಭದಲ್ಲಿ ಪಿಂಚಣಿ ಹಾಗೂ ಇತರೆ ಭದ್ರತೆ ಬಹಳ ಮುಖ್ಯವಾದದ್ದು ಆದರೆ ಸರ್ಕಾರವು ಈ ಅವೈಜ್ಞಾನಿಕ ಯೋಜನೆಯನ್ನ ಜಾರಿಗೊಳಿಸುವುದರ ಮೂಲಕ ನೌಕರರ ಭದ್ರತೆಯನ್ನ ಕಸಿದು ಕೊಂಡಿದೆ, ರಾಜ್ಯದಲ್ಲಿ ಸುಮಾರು ಸಾವಿರಾರು ನೌಕರರು ಮರಣ ಹೊಂದಿದ್ದು ಹಾಗೂ ನಿವೃತ್ತಿ ಹೊಂದಿದವರಿಗೆ ಇದುವರೆಗೂ ಸೂಕ್ತ ಪರಿಹಾರ ಸಿಕ್ಕಿರುವುದಿಲ್ಲ. ನೌಕರನ ವೇತನದಲ್ಲಿ ಕಟವಣೆಯಾದ ಹಣವನ್ನು ಮತ್ತು ಸರ್ಕಾರದಿಂದ ನೌಕರನಿಗೆ ಕೊಡುವ ಸಮಾನ ಹಣವನ್ನು ಖಾಸಗಿ ಒಡೆತನದಲ್ಲಿರುವ ಕಂಪನಿಗಳಿಗೆ, ಷೇರು ಮಾರುಕಟ್ಟೆಗೆ ಹೂಡಿಕೆ ಮಾಡುವುದರಿಂದ ಮಾರುಕಟ್ಟೆಯಲ್ಲಿ ಆಗುವ ಏರಿಳಿತವನ್ನು ಆದರಿಸಿ ಸರ್ಕಾರಿ ನೌಕರನಿಗೆ ಪಿಂಚಣಿ ನಿಗಧಿಪಡಿಸುವ ವ್ಯವಸ್ಥೆ ಅವೈಜ್ಞಾನಿಕವಾಗಿದ್ದು, ಎನ್.ಪಿ.ಎಸ್ ಯೋಜನೆಯನ್ನು ರದ್ದುಗೊಳಿಸುವಂತೆ ಜ.೨೦ ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಒಂದು ದಿನದ ರಾಜ್ಯ ಮಟ್ಟದ ಹೋರಾಟ ಹಾಗೂ ಧರಣಿ ಸತ್ಯಾಗ್ರಹಕ್ಕೆ ಕರೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲೆಯ ಸಮಸ್ತ ಸರ್ಕಾರಿ ಎನ್.ಪಿ.ಎಸ್ ನೌಕರರು ಬೆಂಗಳೂರಿನ ಹೋರಾಟಕ್ಕೆ ಭಾಗಿಯಾಗಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಹಕ್ಕೊತ್ತಾಯ ಮಾಡಬೇಕಾಗಿರುವು ಅನಿವಾರ್ಯವಾಗಿ ರುವುದರಿಂದ ಫ್ರೀಡಂ ಪಾರ್ಕ್ ಚಲೋ ಹೋರಾಟಕ್ಕೆ ಭಾಗವಹಿಸುವ ನೌಕರರು ಈ ಕೆಳಗಿನ ಮೊಬೈಲ್ ನಂಬರ್‌ಗೆ ಸಂಪರ್ಕಿಸಲು ಕೋರಲಾಗಿದೆ. ಲಿಂಗರಾಜ ಎಸ್ ಇಟಗಿ ಮೊ:8277366419, ಶಿವಣ್ಣ.ಟಿ ಮೊ: 8884401244, ಕೃಷ್ಣಮೂರ್ತಿ.ಟಿ ಮೊ: 8197118281,, ಜಿ.ಪಿ.ಟಿ.ದೇವರಾಜ್, ಮೊ: 9686139113 ಸಂಪರ್ಕ ಮಾಡಬಹುದಾಗಿದೆ.
ಚಿತ್ರದುರ್ಗ ಸರ್ಕಾರಿ ಎನ್.ಪಿ.ಎಸ್ ನೌಕರ ಸಂಘದ, ಪ್ರಧಾನ ಕಾರ್ಯದರ್ಶಿ ಸಿ.ಹನುಮಂತಪ್ಪ, ಜಿಲ್ಲಾ ಖಜಾಂಚಿ ರಂಗಸ್ವಾಮಿ, ಜಿಲ್ಲಾ ಸಂಚಾಲಕ ಕೃಷ್ಣಮೂರ್ತಿ.ಟಿ, ಜಿಲ್ಲಾ ಲೆಕ್ಕಪರಿಶೋಧಕರಾದ ಕಲ್ಲೇಶ್.ಡಿ, ಚಿತ್ರದುರ್ಗ ತಾಲ್ಲೂಕು ಸರ್ಕಾರಿ ಎನ್.ಪಿ.ಎಸ್ ನೌಕರ ಸಂಘದ ಅಧ್ಯಕ್ಷರಾದ ಲಿಂಗರಾಜ ಎಸ್ ಇಟಗಿ, ತಾಲ್ಲೂಕು ಖಜಾಂಚಿ ಶಿವಣ್ಣ.ಟಿ, ಕಾರ್ಯದರ್ಶಿ ಸಿದ್ದಪ್ಪ ಪಾಟೀಲ್, ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.