ಚಿತ್ರದುರ್ಗ: ಹಣಗಳಿಸುವ ದಿಸೆಯಲ್ಲಿ ಆರೋಗ್ಯದ ಬಗ್ಗೆ ಕಾಳಜಿವಹಿಸಿದೆ ಮುಂದೆ ಏನಾದರೂ ಅದಾಗ ವ್ಯರ್ಥೆ ಪಡೆವುದಕ್ಕಿಂತ ಆರು ತಿಂಗಳಿಗೊಮ್ಮೆ ಆರೋಗ್ಯದ ಬಗ್ಗೆ ಗಮನ ನೀಡಿ ತಪಾಸಣೆ ಮಾಡಿಸಿದರೆ ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಬಹುದೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಬಿ.ವಸ್ತ್ರಮಠ ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಅಂಚೆ ಇಲಾಖೆ ಮತ್ತು ಬಸವೇಶ್ವರ ಆಸ್ಪತ್ರೆ, ಚಿತ್ರದುರ್ಗ ಇವರ ಸಹಯೋಗದಲ್ಲಿ ಬುಧವಾರ ವಕೀಲರ ಭವನದಲ್ಲಿ ‘ಹೆಚ್.ಐ.ವಿ ಸೋಂಕು, ವೈದ್ಯಕೀಯ ತಪಾಸಣೆ ಹಾಗೂ ಅಂಚೆ ಜೀವವಿಮೆ ಕುರಿತು ಏರ್ಪಡಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇತ್ತಿಚೇಗೆ ಯಾವಾಗ ಯಾವ ಖಾಯಿಲೆ ಬರುತ್ತದೆ ಎಂದು ಗೋತ್ತಾಗುವುದಿಲ್ಲ ಕೆಲವೊಂದು ಖಾಯಿಲೆಗಳ ರೋಗದ ಲಕ್ಷಣಗಳು ಮೇಲೆ ಕಂಡು ಬಾರದಿದ್ದರೂ ಸಹಾ ಒಳಗಡೆ ಇರುತ್ತದೆ ಅದನ್ನು ಪತ್ತೇ ಮಾಡಲು ತಪಾಸಣೆ ಅಗತ್ಯವಾಗಿದೆ ಈ ಹಿನ್ನಲೆಯಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ನಮ್ಮ ಆರೋಗ್ಯದ ಬಗ್ಗೆ ಮತ್ತು ನಮ್ಮನ್ನು ನಂಬಿಕೊಂಡವರಿಗಾದರೂ ನಾವು ಆರೋಗ್ಯದಿಂದ ಇರಬೇಕಿದೆ. ಆಲ್ಲದೆ ಏನಾದರೂ ಸಣ್ಣ-ಪುಟ್ಟದಾದ ತೊಂದರೆ ಬಂದರೆ ಅದಕ್ಕೆ ಬೇಕಾದ ಅಗತ್ಯ ಕ್ರಮದ ಬಗ್ಗೆ ಮನೆಯವರಿಗೆ ತಿಳಿದಿರುವಂತೆ ಮಾಹಿತಿ ನೀಡಿ ಎಂದು ಕಿವಿ ಮಾತು ಹೇಳಿ ಇತ್ತಿಚೇಗೆ ನಮ್ಮ ಮೂರು ನಾಲ್ಕು ಜನ ವಕೀಲರು ಸಾವನ್ನಪ್ಪಿದರು ಆದರೆ ಅವರು ವಿಮೆ ಮಾಡಿಸಿದ್ದರೆ ಅವರ ಕುಟುಂಬದವರಿಗೆ ಸಹಾಯವಾಗುತ್ತಿತ್ತು ಇದರ ಬಗ್ಗೆ ಅಂಚೆ ಜೀವ ವಿಮೆ ವಕೀಲರಿಗೆ ಸಹಾಯ ಮಾಡಲು ಮುಂದಾಗಿದೆ ಇದರ ಪ್ರಯೋಜನ ಪಡೆಯುವಂತೆ ಮನವಿ ಮಾಡಿದರು.
ವಕೀಲರ ಸಂಘದ ಅಧ್ಯಕ್ಷ ಎನ್.ವಿ.ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು. ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಸವರಾಜ ಎಸ್.ಚೇಗರೆಡ್ಡಿ, ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ.ವೀರಣ್ಣ, ವಕೀಲರ ಸಂಘದ ಉಪಾಧ್ಯಕ್ಷ ಕೆ.ವೀರಭದ್ರಪ್ಪ, ಅಂಚೆ ಅಧೀಕ್ಷಕ ಎನ್.ಜಿ.ಬಸನಕಟ್ಟಿ ಭಾಗವಹಿಸಿದ್ದರು. ಬಸವೇಶ್ವರ ಆಸ್ಪತ್ರೆಯ ಡಾ: ಪಾಲಾಕ್ಷಯ್ಯ ಆರ್, ಅಂಚೆ ಜೀವವಿಮೆ ಅಭಿವೃದ್ದಿ ಅಧಿಕಾರಿ ಶೇಖ್ ಜಾಕೀರ್ ಹುಸೇನ್ ಡಾ, ರೂಪಶ್ರೀ ಇವರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಿತು.