ಪುಣೆ; ಹಲವಾರು ರಾಜ್ಯಗಳಲ್ಲಿ ಹಕ್ಕಿಗಳು ಆಕಸ್ಮಿಕವಾಗಿ ಸಾಯುತ್ತಿದೆ. ಇದರಿಂದ ಜನರಲ್ಲಿ ಆತಂಕ ಮತ್ತು ಹಕ್ಕಿಜ್ವರದ ಶಂಕೆ ವ್ಯಕ್ತವಾಗಿದೆ. ಕೆಲವು ಕಡೆಗಳಲ್ಲಿ ಹಕ್ಕಿ ಜ್ವರ ದೃಢಪಟ್ಟಿದೆ. ಇದಕ್ಕಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ‘ಏವಿಯನ್ ಫ್ಲೂ (ಹಕ್ಕಿಜ್ವರ)ವನ್ನು ಬೇರೆ ಪ್ರದೇಶಗಳಿಂದ ವಲಸೆ ಬರುವ ಹಕ್ಕಿಗಳು ಇಲ್ಲಿನ ಹಕ್ಕಿಗಳಿಗೆ ಹರಡುತ್ತದೆ. ಆದ್ದರಿಂದ ಹಕ್ಕಿಜ್ವರ ಉಂಟಾಗುತ್ತದೆ. ಈ ಕುರಿತು ಹೆಚ್ಚಿನ ಭಯಪಡಬೇಕಾಗಿಲ್ಲ. ಇದು ಚಳಿಗಾಲದ ಸಂದರ್ಭದಲ್ಲಿ ಸಾಮಾನ್ಯ ಪ್ರಕ್ರಿಯೆಯಾಗಿದೆ ಎಂದು ಈ ಕುರಿತು ಮಾತನಾಡಿದ ಕೇಂದ್ರ ಸರಕಾರದ ಪಶು ಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆಯ ಕಾರ್ಯದರ್ಶಿ ಅತುಲ್ ಚತುರ್ವೇದಿ ಹೇಳಿದ್ದಾರೆ.

ದೇಶದ ಹಲವು ಕಡೆಗಳಲ್ಲಿ ಹಕ್ಕಿಜ್ವರದ ಕುರಿತು ಪ್ರಕರಣಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಮಾತನಾಡಿ ಚತುರ್ವೇದಿ, ಹಕ್ಕಿಜ್ವರ ಹೆಚ್ಚಾಗಿ ಹರಡುವುದು ಚಳಿಗಾಳದ ತಿಂಗಳುಗಳಲ್ಲಾಗಿದೆ.

ಸೆಪ್ಟೆಂಬರ್-ಅಕ್ಟೋಬರ್ ತಿಂಗಳುಗಳಲ್ಲಿ ಪ್ರಾರಂಭಗೊ0ಡರೆ ಫೆಬ್ರವರಿ-ಮಾರ್ಚ್ ವರೆಗೂ ಇರುತ್ತದೆ. ಈ ಕುರಿತಾದಂತೆ ಸುಮ್ಮನೆ ವದಂತಿಗಳನ್ನು ಹರಡಿ ಜನರನ್ನು ಭಯಭೀತರನ್ನಾಗಿ ಮಾಡುವ ಅವಶ್ಯಕತೆಯಿಲ್ಲ.

ಕೆಲವೊಮ್ಮೆ ಹಕ್ಕಿಗಳ ಮರಣ ಸಂಖ್ಯೆಯಲ್ಲಿ ಹೆಚ್ಚಳವಿರುತ್ತದೆ. ಇನ್ನು ಕೆಲವೊಮ್ಮೆ ಕಡಿಮೆ ಇರುತ್ತದೆ. ಸುಮಾರು 15  ವರ್ಷಗಳಿಂದೀಚೆಗೆ ಹಕ್ಕಿ ಜ್ವರದ ಪ್ರಕರಣಗಳು ಕಂಡು ಬರುತ್ತಿದ್ದು, ಇದುವರೆಗೂ ಹಕ್ಕಿಗಳಿಂದ ಮನುಷ್ಯನಿಗೆ ಈ ರೋಗ ಹರಡಿರುವ ಕುರಿತು ಯಾವುದೇ ಪ್ರಕರಣವು ವರದಿಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ಮೊಟ್ಟೆಯಾದರೂ, ಮಾಂಸವಾದರೂ, ಚೆನ್ನಾಗಿ ಬೇಯಿಸಿ ತಿಂದರೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.