ಯಾದಗಿರಿ: ಹಾಗಾದರೆ ಇನ್ನೇಕ ತಡ ಸ್ವಲ್ಪ ಸಮಾದಾನವಾಗಿ ಈ ಸ್ಟೋರಿ ಓದಿ . ಹಂದಿ ಕಂಡ್ರೆ ಯಾರು ತಾನೇ ಮುಗು ಮುಚ್ಚುಕೊಳ್ಳುವುದಿಲ್ಲ ಹೇಳಿ. ಅದರಲ್ಲೂ ಒಂದು ಹಂದಿ ಏನಾದ್ರು ಓಣಿ ಕಡೆ ಬಂದ್ರೆ ನಾಯಿಗಳು ಬೊಗಳುತ್ತಾ, ಹಟ್ಟಿಸಿಕೊಂಡು ಓಡಿಸುವುದನ್ನು ನೋಡಿದ್ದೀರ ತಾನೆ ಆದ್ರೆ ಇಲ್ಲೊಂದು ಹಂದಿ ತಾಯಿ ಕಳೆದುಕೊಂಡ ನಾಯಿ ಮರಿಗಳಿಗೆ  ಹಾಲುಣಿಸುತ್ತಿದೆ ಅಂದ್ರೆ ಆಶ್ಚರ್ಯತಾನೆ.

ಶಹಾಪುರ ನಗರದ ಬಸ್ ಡಿಪೋ ಹಿಂದುಗಡೆ ಇರುವ ಆಶ್ರಯ ಕಾಲೊನಿಯಲ್ಲಿ ನಾಯಿಯೊಂದು ಹಲವು ಮರಿಗಳಿಗೆ ಜನ್ಮ ನೀಡಿ ಮೃತಪಟ್ಟಿದೆ. ಆದರೆ ಹಂದಿಯೊಂದು ಈ ನಾಯಿಮರಿಗಳಿಗೆ ನಿತ್ಯ ಹಾಲುಣಿಸುವ ಕೆಲಸದಲ್ಲಿ ಮುಂದಾಗಿದೆ.

ನಿತ್ಯ ಜಾತಿ ಅದು ಇದು ಅಂತ ಕಿತ್ತಾಡುವ ಮಂದಿ ಈ ಮಾತೃ  ಹೃದಯದ  ಹಂದಿಯನ್ನು ನೋಡಿಯಾದ್ರು ಕಲೆಯಬೇಕಾದ್ದು ಬಹಳ ಇದೆಯಂತೆ. ಏನಂತ್ತೀರ.!