ಬೆಂಗಳೂರು: ಧರ್ಮ ಮತ್ತು ರಾಜಕಾರಣ ಒಂದೇ ನಾಣ್ಯದ ಎರಡು ಮುಖಗಳು ಆದ್ರೆ ನೇರವಾಗಿ ಚುನಾವಣೆಯಲ್ಲಿ ಭಾಗವಹಿಸಿವುದಾ.? ಅಥವಾ ರಾಜಕಾರಣಕ್ಕೆ ಉಪದೇಶ ನೀಡುವುದಾ ಎಂಬುದರ ಬಗ್ಗೆ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಸಂದರ್ಭದಲ್ಲಿ ವಿರಕ್ತಮಠದ ಶೂನ್ಯ ಪೀಠಾಧೀಶರಾದ ಚಿತ್ರದುರ್ಗದ ಮುರುಘಾ ಶರಣರು ಏನು ಹೇಳಿದ್ದಾರೆ ಅಂದ್ರೆ.?

ಖಾವಿಗಳು ಅಷ್ಟೊಂದು ಸುಲಭವಾಗಿ ರಾಜಕೀಯ ಪ್ರವೇಶಿಸುವುದು ಸಾಧ್ಯವಿಲ್ಲ, ಹೀಗಾಗಿ ರಾಜಕೀಯ ಮತ್ತು ಧರ್ಮದ ನಡುವೆ ಅಂತರ ಕಾಯ್ದುಕೊಳ್ಳಬೇಕು ಎಂದು ಚಿತ್ರದುರ್ಗದ ಮುರುಘಾಮಠದ ಶ್ರೀ ಶಿವಮೂರ್ತಿ ಮುರುಘಾ ಸ್ವಾಮೀಜಿ ತಿಳಿಸಿದ್ದಾರೆ.

ಈಗಾಗಲೇ ಖಾವಿ ತೊಟ್ಟ ಸ್ವಾಮೀಜಿಗಳು ನೇರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ. ಈ ಸ್ವಾಮೀಜಿಗಳಿಗೆ ಪ್ರೇರಣೆ ಯಾರಪ್ಪ ಅಂದ್ರೆ ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿಆದಿತ್ಯನಾಥ್.!

ಈ ಎಲ್ಲದರ ನಡುವೆ  ಮೊಟಗಿ ಮಠದ ಪ್ರಭು ಚನ್ನಬಸವಸ್ವಾಮೀಜಿ ಅವರನ್ನು ಕಾಂಗ್ರೆಸ್ ಓಲೈಸುವ ಪ್ರಯತ್ನ ಮಾಡುತ್ತಿದ್ದಾರಂತೆ  ಬಸವ ಧರ್ಮ ಪೀಠದ ಮಾತೆ ಮಹಾದೇವಿ, ಸಿದ್ದೇಶ್ವರ್ ಮಠದ ಬಸವರಾಜ ದೇವರು ಬಾದಾಮಿ ಕ್ಷೇತ್ರದಿಂದ ಸ್ಪರ್ದಿಸಲು ಬಯಸಿದ್ದಾರೆ ಎಂಬುದು ಸುದ್ದಿ ಆದ್ರೆ ಈ ಎಲ್ಲದಕ್ಕೂ ಊಹಾ ಪುಹಗಳಿಗೆ ತೆರೆ ಬೀಳುವುದು  ಚುನಾವಣೆ ದಿನಾಂಕ ಘೋಷಣೆ ಆದಮೇಲೆ.!