ಚಿತ್ರದುರ್ಗ:ಜಾರ್ಖಂಡ್‍ನಲ್ಲಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ಸ್ವಾಮಿ ಅಗ್ನಿವೇಷ್‍ರವರ ಮೇಲೆ ಮೂಲಭೂತವಾದಿಗಳು ಅಮಾನುಷವಾಗಿ ಹಲ್ಲೆ ನಡೆಸಿರುವುದನ್ನು ಮುರುಘಾಮಠದ ಡಾ.ಶಿವಮೂರ್ತಿ ಶರಣರು ಖಂಡಿಸಿದ್ದಾರೆ.

ನೆಲ್ಸನ್ ಮಂಡೇಲಾರವರ 100 ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶರಣರು ಸ್ವಾಮಿ ಅಗ್ನಿವೇಷ್ ಮೇಲೆ ಹಲ್ಲೆ ನಡೆಸಿರುವವರನ್ನು ಬಂಧಿಸಿ ಸೂಕ್ತ ವಿಚಾರಣೆ ನಡೆಸಿ ಕಾನೂನು ರೀತಿ ಕ್ರಮ ಕೈಗೊಂಡು ಸ್ವಾಮಿ ಅಗ್ನಿವೇಷ್‍ಗೆ ಸೂಕ್ತ ರಕ್ಷಣೆ ನೀಡಬೇಕೆಂದು ಜಾರ್ಖಂಡ್ ಸರ್ಕಾರವನ್ನು ಒತ್ತಾಯಿಸಿದರು.