ಬೆಂಗಳೂರು : ಸ್ನಾತಕ ಹಾಗೂ ಸ್ನಾತಕೋತ್ತರ ಪದವೀಧರರಿಗೆ ಇಲ್ಲಿದೆ ಸಿಹಿಸುದ್ದಿ. ರಾಷ್ಟ್ರೀಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ನಲ್ಲಿ ವಿವಿಧ 510 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

1) ರಾಜ್ಯ ಯೋಜನಾ ಸಮನ್ವಯಯಕಾರರು (10 )

2) ಯಂಗ್ ಫೆಲೋ ಹುದ್ದೆ (250)

3) ಕ್ಲಸ್ಟರ್ ಮಟ್ಟದ ಸಂಪನ್ಮೂಲ ವ್ಯಕ್ತಿ (250)

ರಾಜ್ಯ ಶಾಸ್ತ್ರ/ಸಮಾಜಶಾಸ್ತ್ರ/ಸಾಮಾಜಿಕ ಕಾರ್ಯ/ಅಭಿವೃದ್ದಿ ಅಧ್ಯಯನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದವರು ರಾಜ್ಯ ಯೋಜನಾ ಸಮನ್ವಯಯಕಾರ ಹಾಗೂ ಯಂಗ್ ಫೆಲೋ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಗುತ್ತಿಗೆ ಮಾಸಿಕ ವೇತನ 55,000 ರೂ ಆಗಿರುತ್ತದೆ.

ಹಾಗೂ ಯಾವುದೇ ಪದವಿ ಪೂರೈಸಿದವರು ಕ್ಲಸ್ಟರ್ ಮಟ್ಟದ ಸಂಪನ್ಮೂಲ ವ್ಯಕ್ತಿ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಮಾಸಿಕ ವೇತನ 12.500 ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ http://nirdpr.org.in ವೀಕ್ಷಿಸಬಹುದು.