ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಒಟ್ಟು 3850 ಸರ್ಕಲ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.

ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್ 16 ಕೊನೆಯ ದಿನವಾಗಿದೆ.

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದಾದರೂ ಒಂದು ಪದವಿ ಹೊಂದಿರಬೇಕು. ಶಾರ್ಟ್ ಲಿಸ್ಟ್ ಹಾಗೂ ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

 ವಯಸ್ಸಿನ ಮಿತಿ ಆಗಸ್ಟ್ 1 2020 ಕ್ಕೆ ಅನ್ವಯವಾಗುವಂತೆ 30 ವರ್ಷ ದಾಟಿರಬಾರದು.

ಎಸ್ ಸಿ, ಎಸ್ಟಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.ಒಬಿಸಿ ವರ್ಗದವರು 750 ರೂ. ಶುಲ್ಕ ಪಾವತಿ ಪಾಡಬೇಕು. ಹೆಚ್ಚಿನ ಮಾಹಿತಿಗಾಗಿ ಎಸ್ ಬಿಐ ವೆಬ್ ಸೈಟ್ sbi.com.in ಗೆ ಭೇಟಿ ನೀಡಬಹುದೆಂದು ತಿಳಿಸಿದೆ.